ಚಿತ್ರದುರ್ಗ: ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ದವೆಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದ್ದಾರೆ.
ಚಿತ್ರದುರ್ಗದ ಖಾಸಗಿ ಹೋಟೆಲ್ ನಲ್ಲಿ ಮಾದ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರದಲ್ಲಿ ವಿರೋಧ ಪಕ್ಷದವರು ಸುಮ್ನೆ ಇದ್ದರೆ, ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲ ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂಬ ಉದ್ದೇಶದಿಂದ ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಹೆಚ್‍ಡಿಡಿ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ: ಗೋಪಾಲಸ್ವಾಮಿ
Advertisement
Advertisement
ಅಧಿಕಾರ ಇರುವ ಸರ್ಕಾರವನ್ನು ಎಚ್ಚರಿಸುವುದು ವಿರೋಧ ಪಕ್ಷದ ಕೆಲಸ ಆದರೆ ಈ ವಿಪಕ್ಷವು ಜನರ ಗಮನ ಸೆಳೆಯುವುದಕ್ಕೆ ಈ ರೀತಿ ಕೆಲಸ ಮಾಡುತ್ತಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಹಳ ಅನುಭವಿ ರಾಜಕಾರಣಿಯಾಗಿದ್ದು, ಅವರ ತಂದೆಯವರಾದ ಎಸ್ ಆರ್.ಬೊಮ್ಮಾಯಿ ಕಾಲದಿಂದಲೂ ಅವರು ಉತ್ತಮ ಆಡಳಿತಗಾರ ಎನ್ನುವುದನ್ನು ನಾವು ನೋಡಿದ್ದೇವೆ. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ
Advertisement
Advertisement
ಸರ್ಕಾರ ಹಾಗೂ ಬೊಮ್ಮಾಯಿ ಅವರಿಗೆ ಜನರಲ್ಲಿ ಕೆಟ್ಟ ಭಾವನೆ ಬರುವ ನಿಟ್ಟಿನಲ್ಲಿ ವಿಪಕ್ಷ ಈ ಕೆಲಸಮಾಡುತ್ತಿದೆ. ನಮ್ಮ ಬಳಿ ಮಾಹಿತಿ ಇದೆ ಅಂತ ಪದೇ ಪದೇ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಹೀಗಾಗಿ ಕನಿಷ್ಟಪಕ್ಷ ಅವರ ಬಳಿ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಲಿ ಅಂತ ಸವಾಲು ಹಾಕಿದರು. ಹಾಗೆಯೇ ನಾನು ಆರು ಬಾರಿ ಗೆದ್ದು ಹಿರಿಯ ಶಾಸಕನಾಗಿದ್ದೇನೆ. ಹೀಗಾಗಿ ಏನೂ ಆಧಾರ ಇಲ್ಲದೇ ವಿರೋಧ ಪಕ್ಷದವರು ಹೇಳಿದ ರೀತಿ ಆಡಳಿತ ನಡೆಸುವವರು ಮಾತನಾಡಲು ಆಗಲ್ಲ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
ರಾಜ್ಯ ರಾಜಕಾರಣದಲ್ಲಿ ಭಾರೀ ಅಲೆ ಎಬ್ಬಿಸಿರುವ ಈ ಬಿಟ್ ಕಾಯಿನ್ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವುದಕ್ಕೆ ಸಿಎಂ ಬೊಮ್ಮಾಯಿ ಸಮರ್ಥರಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ಧ ಎನಿಸಿದ್ದು, ಯಾರೇ ಆಗಿರಲಿ ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಕೂಡ ಭಾಗಿಯಾಗಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಅದರ ಬಗ್ಗೆ ತನಿಖೆ ಆಗದೇ, ಕಾಂಗ್ರೆಸ್‍ನವರಿಂದ ಈ ರೀತಿ ಟೀಕೆ ಸರಿಯಲ್ಲ. ಜೊತೆಗೆ ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷದವರಾಗಲಿ ಸೂಕ್ತ ಕ್ರಮವಾಗಲಿದೆ. ಆದರೆ ಬಿಟ್ ಕಾಯಿನ್ ವಿಚಾರಕ್ಕೆ ಬೊಮ್ಮಾಯಿ ಅವರ ಬದಲಾವಣೆ ಪ್ರಶ್ನೆ ಕೂಡ ಇಲ್ಲ. ಮುಂಬರುವ 2023 ಚುನಾವಣೆಯಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.