ಬೆಂಗಳೂರು: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕನ ಮಗನ ಹೆಸರಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ ಬೆನ್ನಲ್ಲೇ ನಿಮಗೆ ಧಮ್ ಇದ್ದರೆ ಅರೆಸ್ಟ್ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದ ಅಂಕಿ, ಸಂಖ್ಯೆ ಕೇಳಿದರೆ ನಾನೇ ಮುರ್ಚೆ ಬೀಳು ಹಾಗಿದೆ. ನನಗೆ ಅಧಿಕಾರ ಇದ್ದರೆ ನಾನೇ ಬಹಿರಂಗ ಪಡಿಸುತ್ತಿದ್ದೆ. ನಮಗೆ ಎಲ್ಲವೂ ಬ್ಯಾಕ್ ಡೋರ್ ಮಾಹಿತಿ, ನಿಮ್ಮದೆ ಸಚಿವರು, ನಿಮ್ಮದೆ ಅಧಿಕಾರಗಳು, ನಿಮ್ಮವರೆ ಕೊಡುತ್ತಿರುವ ಮಾಹಿತಿ ನಮಗೆ ಸಿಕ್ಕಿರುವುದು. ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಮಗನ ಪಾತ್ರವಿದೆ ಅಂತ ಆರೋಪ ಮಾಡಿದ್ದಾರೆ. ಬಿಜೆಪಿಯವರಿಗೆ ಧಮ್ ಇದ್ದರೆ ಅದು ಯಾರು ಅಂತ ಹೇಳಲಿ. ಬಿಜೆಪಿಯವರಿಗೆ ತಾಕತ್ ಇದ್ದರೆ ಕಾಂಗ್ರೆಸ್‍ನ ಯಾವ ಮುಖಂಡರ ಮಗನ ಹೆಸರಿದೆ ಹೇಳಲಿ ಅರೆಸ್ಟ್ ಮಾಡಲಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್‌ನವರಿದ್ದರೆ ತನಿಖೆ ಮಾಡಿ ನೇಣಿಗೆ ಹಾಕಲಿ: ಡಿ.ಕೆ.ಶಿವಕುಮಾರ್
ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಇಡಿಗೆ ಯಾವ ತನಿಖೆಗೆ ವಹಿಸಿದ್ದಾರೆ ಮಾಹಿತಿ ಜನರ ಮುಂದಿಡಲಿ. ಎಷ್ಟು ಬಿಟ್ ಕಾಯಿನ್ ರಿಕವರಿ ಆಗಿದೆ ಜನರಿಗೆ ತಿಳಿಸಲಿ. ಕಾಂಗ್ರೆಸ್ ಲೀಡರ್ ಮಗನ ಹೆಸರಿದೆ ಅಂತ ಹೋಮ್ ಮಿನಸ್ಟರ್ ಹೇಳ್ತಾರೆ. ಯಾರೇ ಇದ್ರೂ ಅವರನ್ನು ಅರೆಸ್ಟ್ ಮಾಡಿ ಹಾಗಿದ್ರೆ. ಧಮ್ ಇದ್ರೆ ಅರೆಸ್ಟ್ ಮಾಡಿಸಿ ಹೋಮ್ ಮಿನಿಸ್ಟರ್. ಎಷ್ಟು ಜನ ಹೆಸರು ಹೊರಬರುತ್ತೆ ಹೋಮ್ ಮಿನಿಸ್ಟರ್ ಗೆ ಗೊತ್ತಿದೆಯಾ? ಆಫಿಸರ್ಸ್ ಎಷ್ಟು ಜನ ಇದ್ದಾರೆ ಗೊತ್ತಾ? ಏಕೆ ಹೋಮ್ ಮಿನಿಸ್ಟರ್ ಆಫಿಸರ್ಸ್ ರಕ್ಷಣೆ ಮಾಡ್ತಿದ್ದಾರೆ? ಯಾರ್ಯಾರ ಹೆಸರನ್ನು ಮುಚ್ಚಿಡ್ತಿದಿರಾ? ಎಂದು ಗೃಹ ಸಚಿವರಿಗೆ ಪ್ರಶ್ನೆ ಹಾಕಿದ್ದಾರೆ.
ಸಿಎಂ ಮಗನೋ ಶಿವಕುಮಾರ್ ಮಗಾನೋ ಯಾರ್ಯಾರಿದಾರೆ ಎಲ್ಲಾ ಮಾತಾಡೋಕೆ ಹೋಗಲ್ಲ. ಪ್ರಧಾನಿ ಕಚೇರಿಗೆ ಎಲ್ಲಾ ಮಾಹಿತಿ ಹೋಗಿದೆಯಲ್ಲ. ಯಾರ್ಯಾರ ಹೆಸರು ಇದೆ ಅಂತ ಬಹಿರಂಗ ಪಡಿಸಲಿ. ಸಿಎಂ ದೆಹಲಿ ಭೇಟಿಗೆ ಬಿಟ್ ಕಾಯಿನ್ ಹಗರಣದ ತಳುಕು ಹಾಕಿ ನಾನು ಮಾತನಾಡಲ್ಲ. ಅವರು ಅಧಿಕೃತವಾಗಿ ಕಾರ್ಯಕ್ರಮ ಹಾಕಿಕೊಂಡು ಹೋಗಿದ್ದಾರೆ. ಅದನ್ನು ಇದಕ್ಕೆ ಲಿಂಕ್ ಮಾಡಲ್ಲ. ಆದರೆ ಎಲ್ಲಾ ಮಾಹಿತಿಯನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರರನ್ನು ಹಾಡಿ ಹೊಗಳಿಕೊಂಡ ಸಿದ್ದು-ಜಿಟಿಡಿ