ಲಂಡನ್: ಬಿಟ್‍ಕಾಯಿನ್ ಎಟಿಎಂನಿಂದ ಗರಿ ಗರಿ ನೋಟುಗಳು ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲಂಡನ್ ನಗರದ ಟ್ಯೂಬ್ ಸ್ಟೇಷನ್ (ರೈಲು ನಿಲ್ದಾಣ) ಎಟಿಎಂನಿಂದ 20 ಪೌಂಡ್ (ಸುಮಾರು 1,700 ರೂ) ಮುಖಬೆಲೆಯ ನೋಟುಗಳು ಹೊರ ಬಂದಿವೆ.
ಲಂಡನ್ ನಗರದ ಬಾಂಡ್ ಸ್ಟ್ರೀಟ್ ನ ಟ್ಯೂಬ್ ಸ್ಟೇಷನ್ ನಲ್ಲಿ ವ್ಯಕ್ತಿಯೋರ್ವ ದೊಡ್ಡ ಮೊತ್ತದ ಹಣ ಡ್ರಾ ಮಾಡಿದ ಪರಿಣಾಮ 20 ಪೌಂಡ್ ಮುಖಬೆಲೆಯ ನೋಟುಗಳು ಹೊರ ಬಂದಿವೆ. ನಿಲ್ದಾಣದ ಭದ್ರತಾ ಸಿಬ್ಬಂದಿ ಹಣವನ್ನು ಯಾರು ಎತ್ತಿಕೊಳ್ಳದಂತೆ ಎಚ್ಚರವಹಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು. ಗ್ರಾಹಕ ಎಟಿಎಂ ಮುಂದೆ ಬ್ಯಾಗ್ ಇಟ್ಟು ಹಣವನ್ನು ತುಂಬಿಕೊಳ್ಳುತ್ತಿದ್ದಾನೆ. ಬ್ಯಾಗ್ ಅಕ್ಕಪಕ್ಕ ಬಿದ್ದಿರುವ ನೋಟುಗಳನ್ನು ಕಾಲಿನಿಂದ ತಳ್ಳಿ ಒಂದೆಡೆ ಸೇರಿಸಿದ್ದಾನೆ.
Advertisement
Advertisement
ದೊಡ್ಡ ಮೊತ್ತ ಡ್ರಾ ಮಾಡಿದಾಗ ಬಿಟ್ ಕಾಯಿನ್ ಯಂತ್ರ ಒಂದೇ ಸಾರಿ ನಿಧಾನಕ್ಕೆ ಹಣವನ್ನು ಹೊರ ನೀಡಿದೆ. ಸ್ವಲ್ಪ ಸ್ವಲ್ಪ ಹಣ ನೀಡುತ್ತಿದ್ದರಿಂದ ವ್ಯಕ್ತಿ ಕೆಳಗಡೆ ಬ್ಯಾಗ್ ಇರಿಸಿದ್ದಾನೆಂದು ವರದಿಯಾಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಬಿಟ್‍ಕಾಯಿನ್ ಟೆಕ್ನಾಲಜಿ ಮುಖ್ಯಸ್ಥ ಮತ್ತು ಸಿಇಓ ಆಡಂ ಗ್ರಾಮೊವಸ್ಕಿ, ನಮ್ಮ ಕಂಪನಿಯ ಯಂತ್ರಗಳಿಂದ ಇಂಗ್ಲೆಂಡ್ ನೋಟುಗಳು ಹೊರಬರೋದು ನಿಧಾನವಾಗುತ್ತಿದೆ. ಹೀಗಾಗಿ ಯಂತ್ರಗಳನ್ನು ನೋಟುಗಳಿಗೆ ಅನುಗುಣವಾಗಿ ರೂಪಿಸಬೇಕಿದೆ. ಎಟಿಎಂ ಮುಂದೆ ಬ್ಯಾಗ್ ಇಟ್ಟು ಗ್ರಾಹಕರೊಬ್ಬರು ಹಣ ತುಂಬಿಕೊಳ್ಳುತ್ತಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಲಂಡನ್ ನೋಟುಗಳನ್ನು ಸಪೋರ್ಟ್ ಮಾಡುವ ತಂತ್ರಜ್ಞನವನ್ನು ಎಟಿಎಂಗಳಿಗೆ ಅಳವಡಿಸಲಾಗುವುದು. ನಮ್ಮ ಎಟಿಎಂಗಳು ಒಂದೇ ವ್ಯವಹಾರದಲ್ಲಿ ಹೆಚ್ಚು ಹಣ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
Advertisement
ವಿಡಿಯೋದಲ್ಲಿಯ ನಮ್ಮ ಗ್ರಾಹಕ ನಿರ್ಲಕ್ಷ್ಯದಿಂದ ಬ್ಯಾಗ್ ಕೆಳಗಿಟ್ಟು ಹಣ ತುಂಬಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಎಟಿಎಂ ಗಳನ್ನು ಮರುವಿನ್ಯಾಸಗೊಳಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಯಂತ್ರಗಳಲ್ಲಿ ಕಡಿಮೆ ಮುಖಬೆಲೆಯ ನೋಟುಗಳನ್ನು ಇರಿಸಲಾಗುವುದು ಎಂದು ಆಡಂ ಹೇಳಿದ್ದಾರೆ.