ಐವತ್ತನೇ ದಿನದ ಸಂಭ್ರಮದಲ್ಲಿ ಬಿಸಿಲು ಕುದುರೆ

Public TV
1 Min Read
Bisilu kudure 1

ನ್ನಡದ ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಹೃದಯ ಶಿವ (Hrudayashiva) ನಿರ್ದೇಶನದ ‘ಬಿಸಿಲು ಕುದುರೆ’ (Bisilu kudure) ಚಿತ್ರ ಕಳೆದ ಏಪ್ರಿಲ್ 21ರಂದು ಬಿಡುಗಡೆಯಾಗಿತ್ತು.  ಚಿತ್ರ ಈಗ ಐವತ್ತು ದಿನಗಳನ್ನು (Fifty days) ಪೂರೈಸಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.

Bisilu kudure 2

ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ  ಈ ಚಿತ್ರವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರ ಒಂದೇ ಚಿತ್ರಮಂದಿರದಲ್ಲಿ ಐವತ್ತು ದಿನ ಪೂರೈಸಿಲ್ಲ. ರಾಜ್ಯದ ವಿವಿಧ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಂಡು ಈಗ ಐವತ್ತನೇ ದಿನ ಪೂರೈಸಿದೆ. ಸದ್ಯದಲ್ಲೇ ಸಿನಿಮಾ ಓಟಿಟಿಯಲ್ಲೂ ಬರಲಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಸದ್ಯದಲ್ಲೇ ನನ್ನ ನಿರ್ದೇಶನದಲ್ಲಿ ಎರಡು ಹೊಸ ಚಿತ್ರಗಳು ಆರಂಭವಾಗಲಿದೆ. ಅದರಲ್ಲಿ ಒಂದು ಬಿಗ್ ಬಜೆಟ್ ಚಿತ್ರವಾಗಿರಲಿದೆ ಎಂದರು ನಿರ್ದೇಶಕ ಹೃದಯ ಶಿವ.

ನಾನು ಚಿತ್ರದ ಕುರಿತು ಬಿಡುಗಡೆ ಪೂರ್ವದಲ್ಲೇ ಸಾಕಷ್ಟು ಮಾತನಾಡಿದ್ದೇನೆ. ಈಗ ಐವತ್ತನೇ ದಿನದ ಸಂತೋಷವನ್ನು ಸಂಭ್ರಮಿಸುತ್ತಿದ್ದೇನೆ ಎಂದು ನಟ ಸಂಪತ್ ಮೈತ್ರೇಯ (Sampat Maitreya)ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಸುನೀತಾ, ಕರಿಸುಬ್ಬು, ವಿಕ್ಚರಿ ವಾಸು, ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ಛಾಯಾಗ್ರಾಹಕ ನಾಗಾರ್ಜುನ, ಸಂಕಲನಕಾರ ಕೆಂಪರಾಜ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿದರು.  ಹೃದಯ ಶಿವ ಚಿತ್ರತಂಡದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Share This Article