ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ (Bishan Singh Bedi) ನಿಧನರಾಗಿದ್ದಾರೆ.
ಪ್ರಸಿದ್ಧ ಸ್ಪಿನ್ನರ್ ಆಗಿದ್ದ ಬಿಶನ್ ಸಿಂಗ್ ಬೇಡಿ (77) 1967 ಮತ್ತು 1979ರ ನಡುವೆ ಭಾರತಕ್ಕಾಗಿ (Team India) 67 ಟೆಸ್ಟ್ ಪಂದ್ಯವಾಡಿ 266 ವಿಕೆಟ್ ಪಡೆದಿದ್ದಾರೆ. ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯವಾಡಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ನಿಂದಲೇ ಮತ್ತೊಂದು ದಾಖಲೆ ಬರೆದ ಸಿಕ್ಸರ್ ಶರ್ಮಾ
Advertisement
The BCCI mourns the sad demise of former India Test Captain and legendary spinner, Bishan Singh Bedi.
Our thoughts and prayers are with his family and fans in these tough times.
May his soul rest in peace ???? pic.twitter.com/oYdJU0cBCV
— BCCI (@BCCI) October 23, 2023
Advertisement
ಅಮೃತಸರದಲ್ಲಿ 1946ರ ಸೆಪ್ಟೆಂಬರ್ 25 ರಂದು ಜನಿಸಿದ ಬೇಡಿ ಭಾರತದ ಮೊದಲ ಏಕದಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು 370 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,560 ವಿಕೆಟ್ ಪಡೆದಿದ್ದಾರೆ. ದೇಶೀಯ ಲೀಗ್‌ನಲ್ಲಿ ದೆಹಲಿ ಪರ ಸಿಂಗ್ ಆಡಿದ್ದರು.
Advertisement
ಗಾಯಗೊಂಡಿದ್ದ ಅಜಿತ್ ವಾಡೇಕರ್ ಅನುಪಸ್ಥಿತಿಯಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದಾಗ ಇಂಗ್ಲೆಂಡ್ (England) ವಿರುದ್ಧದ 1971 ರ ಭಾರತ ಐತಿಹಾಸಿಕ ಸರಣಿ ಜಯ ದಾಖಲಿಸಿತ್ತು.
Advertisement
Web Stories