ಬೆಂಗಳೂರು: ಮಳೆಯ ಆರ್ಭಟದಿಂದ ಕೊಡಗು ಜನರ ಜೀವನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅಧಿಕಾರದ ಮದದಲ್ಲಿ ಸಚಿವರೊಬ್ಬರು ಕೊಡಗು ಪ್ರವಾಹದ ನಿರಾಶ್ರಿತರಿಗೆ ತಿಂಡಿ, ತಿನಿಸುಗಳನ್ನು ಎಸೆಯುವ ಮೂಲಕ ಮಾನವೀಯತೆಯನ್ನು ಮೆರೆತಿದ್ದಾರೆ.
ಸೂಪರ್ ಸಿಎಂ ಎಂದೇ ಬಿಂಬಿತರಾಗಿರುವ ಲೋಕೋಪಯೋಗಿ ಸಚಿವರಾದ ಹೆಚ್.ಡಿ. ರೇವಣ್ಣ ಪ್ರವಾಹ ನಿರಾಶ್ರಿತರಿಗೆ ಬಿಸ್ಕೆಟ್ ಎಸೆಯುವ ಮೂಲಕ ಅಮಾನವೀಯತೆಯನ್ನು ಮೆರೆದಿದ್ದಾರೆ. ಶನಿವಾರ ರೇವಣ್ಣ ಮತ್ತು ಎ.ಟಿ. ರಾಮಸ್ವಾಮಿ ಅವರು ಹಾಸನ ಜಿಲ್ಲೆಯ ರಾಮನಾಥಪುರದ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ್ದರು. ಆದರೆ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ಸಚಿವ ರೇವಣ್ಣ ಆಹಾರವನ್ನು ಪ್ರಾಣಿಗಳಿಗೆ ಎಸೆಯೋ ರೀತಿ ಬಿಸ್ಕೆಟ್ ಎಸೆದಿದ್ದಾರೆ.
Advertisement
Advertisement
ರೇವಣ್ಣ ಅವರು ಬಂದಿದ್ದು, ನಮ್ಮ ಕಷ್ಟವನ್ನು ಆಲಿಸುತ್ತಾರೆ ಅಂತಾ ನಿರಾಶ್ರಿತರು ಸಚಿವರನ್ನು ಮುತ್ತಿಕೊಂಡಿದ್ದರು. ಈ ವೇಳೆ ರೇವಣ್ಣ ಸಂತ್ರಸ್ತರಿಗೆ ಕೊಡಲು ಒಂದು ಬಾಕ್ಸ್ ಬಿಸ್ಕೆಟ್ ತಂದಿದ್ದರು ಅದನ್ನು ಅಮಾನವೀಯತೆಯಿಂದ ಎಸೆದಿದ್ದಾರೆ. ರೇವಣ್ಣ ಅವರು ಬಿಸ್ಕೆಟ್ ಎಸೆಯುತ್ತಿದ್ದರೆ ಪಕ್ಕದಲ್ಲೇ ನಿಂತಿದ್ದ ಎ.ಟಿ ರಾಮಸ್ವಾಮಿ ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು.
Advertisement
ಶಿಬಿರದಲ್ಲಿ ಸುಮಾರು 100 ಜನರು ಇದ್ದರು ಅಷ್ಟೇ. ಈಗಾಗಲೇ ಎಲ್ಲರಿಗೂ ಜಿಲ್ಲಾಧಿಕಾರಿ ಮತ್ತು ತಾಲೂಕು ಸದ್ಯರೆಲ್ಲರೂ ಆಶ್ರಯ ನೀಡಿದ್ದರು. ನಮ್ಮ ಕ್ಷೇತ್ರ ಏನೋ ಬರುಬೇಕು ಎಂದು ಪ್ರಚಾರಕ್ಕಾಗಿ ಮತ್ತು ಕಾಟಚಾರಕ್ಕಾಗಿ ಬಂದು ಬಿಸ್ಕೆಟ್ ಎಸೆದು ಹೋಗಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ರಾಮಸ್ವಾಮಿ ಅವರು ಸುಮ್ಮನೆ ನೋಡುತ್ತಾ ನಿಂತಿದ್ದರು. ರೇವಣ್ಣ ಅವರು ನಡೆ ನಿಜಕ್ಕೂ ಬೇಸರವಾಯಿತು ಎಂದು ಸ್ಥಳೀಯ ಗಣೇಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೂರು ದಿನಗಳಿಂದ ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿ ಜನರ ಬಳಿ ಸ್ವತಃ ಅವರೇ ಕಷ್ಟವನ್ನು ಆಲಿಸುತ್ತಿದ್ದಾರೆ. ಆದರೆ ರೇವಣ್ಣ ಅಧಿಕಾರ ಮದದಲ್ಲಿ ಈ ರೀತಿಯಾಗಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv