ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರೈ ಐಸ್‍ನಿಂದ ದುರಂತ

Public TV
2 Min Read
DRY ICE

– ಬರ್ತ್ ಡೇ ಗರ್ಲ್ ಪತಿ ಸೇರಿ ಮೂವರು ದುರ್ಮರಣ
– ನೋವಿನ ಕತೆ ಬಿಚ್ಚಿಟ್ಟ ಪತ್ನಿ

ಮಾಸ್ಕೋ: ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸಲುವಾಗಿ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಸುರಿದ ನಂತರ ಮೂವರು ಮೃತಪಟ್ಟಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಯೆಕಟೆರಿನಾ ಡಿಡೆಂಕೊ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ಅವಘಡ ಸಂಭವಿಸಿದೆ. ಇನ್‍ಸ್ಟಾಗ್ರಾಂನಲ್ಲಿ ತುಂಬಾ ಆಕ್ಟೀವ್ ಆಗಿದ್ದು, ತುಂಬಾ ಫೇಮಸ್ ಆಗಿದ್ದರು. ಹೀಗಾಗಿ ಡಿಡೆಂಕೊ ತನ್ನ 29 ನೇ ಹುಟ್ಟುಹಬ್ಬದ ಪಾರ್ಟಿಯನ್ನು ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪೂಲ್ ಕಾಂಪ್ಲೆಕ್ಸ್ ನಲ್ಲಿ ಆಯೋಜನೆ ಮಾಡಿದ್ದರು. ಅಲ್ಲಿ ಎಲ್ಲರೂ ತುಂಬಾ ಸಂಭ್ರಮದಿಂದ ಇದ್ದರು.

Capture

ಪಾರ್ಟಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಮತ್ತು ವಿಶ್ಯುವಲ್ ಎಫೆಕ್ಟ್ ಚೆನ್ನಾಗಿರಲಿ ಎಂಬ ಕಾರಣಕ್ಕೆ 25 ಕೆ.ಜಿ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಹಾಕಲಾಗಿತ್ತು. ಆದರೆ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಹಾಕುತ್ತಿದ್ದಂತೆ ಸುತ್ತಲು ಹೊಗೆ ಆವರಿಸಿಕೊಂಡಿದೆ. ನಂತರ ನೋಡ ನೋಡುತ್ತಿದ್ದಂತೆ ಡಿಡೆಂಕೊ ಪತಿ ಸೇರಿದಂತೆ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಅಷ್ಟೇ ಅಲ್ಲದೇ ಈ ಅವಘಡದಿಂದ ಅನೇಕರು ಗಾಯಗೊಂಡಿದ್ದಾರೆ. ಈ ಅವಘಡದ ಬಗ್ಗೆ ಇಬ್ಬರು ಮಕ್ಕಳ ತಾಯಿ ಯೆಕಟೆರಿನಾ ಡಿಡೆಂಕೊ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಮಗಳು ‘ಡ್ಯಾಡಿ ಎಲ್ಲಿದ್ದಾರೆಂದು’ ಕೇಳುತ್ತಿದ್ದಾಳೆ. ಇದನ್ನು ಕೇಳುವಾಗ ನನ್ನ ಕರುಳೇ ಹಿಂಡಿದಂತಾಗುತ್ತದೆ ಎಂದು ಅಳುತ್ತಾ ತನ್ನ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.

dry ice istock

ಡ್ರೈ ಐಸ್ ಘನೀಕೃತ ಇಂಗಾಲದ ಡೈ ಆಕ್ಸೈಡ್. ಇದೇ ಡ್ರೈ ಐಸನ್ನು ನೀರಿಗೆ ಹಾಕಿರೆ ನೀರಿನಲ್ಲಿ ಹೊಗೆ ಆವರಿಸಿಕೊಳ್ಳುತ್ತದೆ. ನಾವು ಕೈಯಲ್ಲಿ ಹಿಡಿದುಕೊಂಡರೆ ಹೇಗೆ ನೀರಾಗಿ ಕರಗುತ್ತದೋ, ಅಂತೆಯೇ ಈ ಡ್ರೈ ಐಸ್‍ನಿಂದ ಕಾರ್ಬನ್ ಡೈ ಆಕ್ಸೈಡ್ ಹೊಗೆಯ ರೂಪದಲ್ಲಿ ಹೊರಬರುತ್ತದೆ.

ಘಟನೆಯ ಬಗ್ಗೆ ಮಾತನಾಡಿದ ರಷ್ಯಾದ ತನಿಖಾ ಸಮಿತಿಯ ವಕ್ತಾರ ಯುಲಿಯಾ ಇವನೊವಾ, ಇತರರು ಈ ಅವಘಡದಿಂದ ಗಾಯಗೊಂಡಿದ್ದಾರೆ. ಆದರೆ ಎಷ್ಟು ಮಂದಿ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

didenko

ಯೆಕಟೆರಿನಾ ಡಿಡೆಂಕೊ ಫಾರ್ಮಸಿಸ್ಟ್ ಆಗಿದ್ದು, ಇನ್‍ಸ್ಟ್ರಾಗ್ರಾಂನಲ್ಲಿ ಔಷಧೀಯ ಉತ್ಪನ್ನಗಳಿಂದ ಹಣವನ್ನು ಹೇಗೆಲ್ಲಾ ಉಳಿಸಬಹುದು ಎಂದು ತಿಳಿಸಿಕೊಡುತ್ತಿದ್ದರು. ಇವರ ಇನ್‍ಸ್ಟಾಗ್ರಾಂನಲ್ಲಿ 1.5 ಮಿಲಿಯಲ್‍ಗಿಂತಲೂ ಅಧಿಕ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

Share This Article