ರಾಮನಗರ: ಜಿಲ್ಲಾ ಕಾರಾಗೃಹದಲ್ಲಿ (Jail) ಕೈದಿಗಳು (Prisoners) ಹುಟ್ಟುಹಬ್ಬ (Birth Day) ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೈದಿಗಳ ಮೇಲೆ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ (Jail) ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಎಂಬಾತನ ಬರ್ತ್ ಡೇ ಆಚರಣೆ ಮಾಡಿ ಜೈಲಿನಲ್ಲೇ ಕೇಕ್ ಕತ್ತರಿಸಲಾಗಿತ್ತು. ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಕೇಕ್ ಕತ್ತರಿಸಿ, ಹ್ಯಾಪಿ ಬರ್ತ್ ಡೇ ಕಿರಣ್ ಅಣ್ಣ ಎಂದು ಹೂವಿನಲ್ಲಿ ಬರೆದು ಗ್ರೂಪ್ ಫೋಟೋ ತೆಗೆದುಕೊಂಡಿರುವ ಎರಡು ಫೋಟೋಗಳು ವೈರಲ್ ಆಗಿತ್ತು.
ಕೈದಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳಲು ಜೈಲಿನ ಅಧಿಕಾರಿಗಳೇ ಸಾಥ್ ನೀಡಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಅಲ್ಲದೇ ಜೈಲಿನ ಒಳಗಡೆ ಕೇಕ್ ತೆಗೆದುಕೊಂಡು ಹೋಗಲು ಅಧಿಕಾರಿ, ಸಿಬ್ಬಂದಿಗಳೇ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಮನಗರ ಎಸ್ಪಿ ಸಂತೋಷ್ ಬಾಬು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷನ ಮಗನಿಂದ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ- ದೂರು ದಾಖಲು
ಈ ವೇಳೆ ಎರಡು ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದು ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಕಿರಣ್ ಹಾಗೂ ಆತನ ಸಹ ಖೈದಿಗಳಾದ ಲೋಕೇಶ್, ವೇಣುಕುಮಾರ್, ಕಾರ್ತಿಕ್, ಅಪ್ಪು ನಾಯ್ಕ್ ಎಂಬುವವರ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಹಕಾರ ನೀಡಿದ ಜೈಲು ಸಿಬ್ಬಂದಿ ವಿರುದ್ಧ ತನಿಖೆಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್ ಅಧಿಕಾರಿಗಳು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k