– ನಿನ್ನ ಕನಸನ್ನು ಬೆನ್ನಟ್ಟು
– ಗೊತ್ತಿಲ್ಲದ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ 15 ವರ್ಷದ ಚಿಕ್ಕುಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
15 ವರ್ಷದ ಚಿಕ್ಕು ಬೇರೆ ಯಾರೂ ಅಲ್ಲ. ಸ್ವತಃ ವಿರಾಟ್ ಕೊಹ್ಲಿ ಅವರ ನಿಕ್ ನೆಮ್ ಚಿಕ್ಕು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಕೊಹ್ಲಿ, ನನ್ನ ಪ್ರಯಾಣ ಮತ್ತು ಜೀವನದ ಪಾಠಗಳು 15 ವರ್ಷದ ನನಗೆ ವಿವರಿಸಿದೆ. ಸರಿ, ನಾನು ಇದನ್ನು ಬರೆಯಲು ಪ್ರಯತ್ನ ಮಾಡಿದ್ದೇನೆ. ಅದನ್ನು ಓದಲು ನಿಮಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ವಿರಾಟ್ ಜಾಲಿ ಟ್ರಿಪ್- ಹಳ್ಳಿಯ ಪುಟ್ಟ ಮನೆಯನ್ನ ಪರಿಚಯಿಸಿದ ವಿರುಷ್ಕಾ
Advertisement
What a blessing to be able to visit such divine places with my soulmate. Also thank you everyone for your kind wishes from the bottom of my heart. ????????❤️ pic.twitter.com/ww8HfE7o4Z
— Virat Kohli (@imVkohli) November 5, 2019
Advertisement
ಭಾರತದ ತಂಡದ ಮಾಜಿ, ಹಾಲಿ ಆಟಗಾರರು ಸೇರಿದಂತೆ ಅನೇಕರು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಟಿ-20 ಸರಣಿಗೆ ವಿಶ್ರಾಂತಿ ಪಡೆದಿರುವ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಜೊತೆಗೆ ಜಾಲಿ ಟ್ರಿಪ್ ಮೂಡ್‌ನಲ್ಲಿದ್ದಾರೆ.
Advertisement
ಪತ್ರದಲ್ಲಿ ಏನಿದೆ?:
ಹಾಯ್ ಚಿಕ್ಕು, ಮೊದಲನೆಯದಾಗಿ ಜನ್ಮದಿನದ ಶುಭಾಶಯಗಳು. ನನ್ನ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳು ನಿನ್ನ ಬಳಿ ಇದೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಪ್ರಶ್ನೆಗಳ ಪೈಕಿ ಹೆಚ್ಚಿನದಕ್ಕೆ ಉತ್ತರಿಸಲು ನಾನು ಹೋಗುವುದಿಲ್ಲ. ಇದಕ್ಕೆ ಕ್ಷಮೆ ಇರಲಿ. ಪ್ರತಿ ಆಶ್ಚರ್ಯವು ಸಿಹಿಗೊಳಿಸುತ್ತದೆ, ಪ್ರತಿ ಸವಾಲು ರೋಮಾಂಚನಗೊಳಿಸುತ್ತದೆ ಮತ್ತು ಪ್ರತಿ ನಿರಾಶೆಯು ಕಲಿಯಲು ಅವಕಾಶ ಕಲ್ಪಿಸುತ್ತದೆ. ನಿನ್ನ ಪ್ರಯಾಣವು ಸೂಪರ್ ಆಗಿದೆ.
Advertisement
ಜೀವನದಲ್ಲಿ ವಿರಾಟ್‌ಗಾಗಿ ಅತ್ಯುನ್ನತ ಸಂಗತಿಗಳಿವೆ. ಆದರೆ ನಿನ್ನ ಜೀವನದಲ್ಲಿ ಬರುವ ಪ್ರತಿಯೊಂದು ಅವಕಾಶಕ್ಕೂ ಸಿದ್ಧನಾಗಿರಬೇಕು. ಆ ಗುಣವನ್ನು ಗಳಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ನಿನ್ನ ಸಾಮರ್ಥ್ಯವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡ. ಸವಾಲುಗಳ ವಿರುದ್ಧ ಏಳಲು ನೀನೇ ಭರವಸೆ ನೀಡಬೇಕು. ಮೊದಲಿಗೆ ಸೋತರೆ ಮತ್ತೆ ಪ್ರಯತ್ನಿಸಬೇಕು.
ನೀನು ಅನೇಕರಿಂದ ಪ್ರೀತಿಸಲ್ಪಡುವೆ, ಕೆಲವರಿಗೆ ಇಷ್ಟವಾಗುವುದಿಲ್ಲ. ನಿನ್ನ ಬಗ್ಗೆ ಗೊತ್ತಿಲ್ಲದವರ ವಿಚಾರವಾಗಿ ತಲೆ ಕೆಡಿಸಿಕೊಳ್ಳಬೇಡ. ನಿನ್ನ ಬಗ್ಗೆ ನೀನು ನಂಬಿಕೆ ಇಡು. ನಿನ್ನ ಜನ್ಮದಿನದಂದು ಆ ಶೂಗಳನ್ನು ತಂದೆ ಉಡುಗೊರೆಯಾಗಿ ನೀಡಲಿಲ್ಲವೆಂದು ನೀನು ಯೋಚಿಸುತ್ತಿರುವೆ ಎನ್ನುವುದು ನನಗೆ ತಿಳಿದಿದೆ.
My journey and life's lessons explained to a 15-year old me. Well, I tried my best writing this down. Do give it a read. ???? #NoteToSelf pic.twitter.com/qwoEiknBvA
— Virat Kohli (@imVkohli) November 5, 2019
ಅಂದು ಬೆಳಗ್ಗೆ ಅವರು ನಿನಗೆ ನೀಡಿದ ಅಪ್ಪುಗೆ ಅಥವಾ ನಿನ್ನ ಎತ್ತರ ಬಗ್ಗೆ ಮಾಡಿದ ತಮಾಷೆಗೆ ಹೋಲಿಸಿದಾಗ ಅವು ಏನೂ ಅಲ್ಲ. ತಂದೆ ಕೆಲವೊಮ್ಮೆ ಕಟ್ಟುನಿಟ್ಟಾಗಿ ಕಾಣಿಸಿರಬಹುದು. ಆದರೆ ಅವರು ನಿನ್ನ ಒಳ್ಳೆಯದನ್ನೇ ಬಯಸುತ್ತಾರೆ.
ಕೆಲವೊಮ್ಮೆ ನಿನ್ನ ಪೋಷಕರು ನಿನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸುವೆ. ಆದರೆ ನಿನ್ನ ಕುಟುಂಬದವರು ಮಾತ್ರ ನಿನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎನ್ನುವುದನ್ನು ನೀನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳು. ಅವರನ್ನು ಮತ್ತೆ ಪ್ರೀತಿಸು, ಗೌರವಿಸು, ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಮೀಸಲಿಡು. ನೀನು ಅವರನ್ನು ಪ್ರೀತಿಸುತ್ತೀರುವೆ ಎಂದು ಅಪ್ಪನಿಗೆ ಹೇಳು.
ಅಂತಿಮವಾಗಿ ನೀನು ನಿನ್ನ ಹೃದಯವನ್ನು ಅನುಸರಿಸು. ನಿನ್ನ ಕನಸನ್ನು ಬೆನ್ನಟ್ಟು. ದಯೆಯನ್ನು ಹೊಂದು ಮತ್ತು ದೊಡ್ಡದಾದ ಕನಸು ಹೇಗೆ ವ್ಯತ್ಯಾಸಗಳನ್ನು ತರುತ್ತದೆ ಎಂಬುದನ್ನು ಜಗತ್ತಿಗೆ ತೋರಿಸು. ನೀನು ನೀನಾಗಿರು.