ಚಿಕ್ಕಬಳ್ಳಾಪುರ: ಜನನ ಮತ್ತು ಮರಣ ಪ್ರಕರಣಗಳ (Birth And Death Certificate) ನೋಂದಣಿಯನ್ನ ನಿಗದಿತ ಕಾಲಮಿತಿಯೊಳಗೆ ತಂತ್ರಾಂಶಗಳಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜನನ ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ನಿಗದಿತ ಕಾಲಮಿತಿಯಲ್ಲಿ ಪ್ರಮಾಣ ಪತ್ರ ವಿತರಣೆ ಆಗಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ನೋಂದಣಿ ಮಾಡುವ ಸಕ್ಷಮ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ವೈಖರಿಯನ್ನ ಪರಿಶೀಲಿಸಿ ಸಕಾಲಕ್ಕೆ ವರದಿ ನೀಡಬೇಕು ಎಂದು ಎಂದು ತಾಕೀತು ಮಾಡಿದ್ದಾರೆ. ಇದನ್ನೂಓದಿ: ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್ ವಿಥ್ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್
Advertisement
Advertisement
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಘಟಿಸುವ ಜನನ, ಮರಣ ಪ್ರಕರಣಗಳನ್ನ ಸಂಬಂಧಪಟ್ಟ ತಂತ್ರಾಂಶದಲ್ಲಿ ನಮೂದಿಸಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆನ್‌ಲೈನ್ ಮೂಲಕ ರವಾನಿಸಬೇಕು. ಸದರಿ ವಿವರವನ್ನ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಪ್ರಮಾಣ ಪತ್ರಗಳನ್ನ ನಿಗದಿತ ಕಾಲಮಿತಿಯೊಳಗೆ ವಿತರಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂಓದಿ: ನಾರಾಯಣಪುರದ ಬಸವಸಾಗರ ಜಲಾಶಯ ಬಹುತೇಕ ಭರ್ತಿ – ರೈತರ ಮೊಗದಲ್ಲಿ ಮಂದಹಾಸ
Advertisement
Advertisement
ಜನನ ಮತ್ತು ಮರಣ ಪ್ರಕರಣಗಳನ್ನ ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಘಟನೆಗಳ ಮಾಹಿತಿಯನ್ನ ಪಡೆದು ಪರಿಶೀಲಿಸಿ ತಂತ್ರಾಂಶದಲ್ಲಿ ನೋಂದಾಣಿ ಮಾಡುವ ಜೊತೆಗೆ ಪ್ರಮಾಣ ಪತ್ರಗಳನ್ನ ವಿತರಿಸುವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಈ ನಿಯಮ ಉಲ್ಲಂಘಿಸುವ ಯಾವುದೇ ಸಂಸ್ಥೆ, ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮಕೈಗೊಳ್ಳಬೇಕು. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ನಮೂದು ಕಾರ್ಯದ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ 2021-22ನೇ ಸಾಲಿನ ಜಿಲ್ಲೆಯ ಅಂಕಿ ಅಂಶಗಳ ನೋಟ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅವಲೋಕನ ಪುಸ್ತಕ, 2022-23ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಅಂದಾಜು ಸಮೀಕ್ಷೆಯ ಕಾರ್ಯ ಯೋಜನಾ ಪಟ್ಟಿಯನ್ನ ಬಿಡುಗಡೆ ಮಾಡಿದರು.
Web Stories