ಬೆಂಗಳೂರು: ಆಕಾಶದಲ್ಲಿ ಸ್ವಚ್ಛಂದವಾಗಿ ಕಲರವ ಮಾಡೋ ಪಕ್ಷಿಗಳ ಕಂಡ್ರೆ ಯಾರಿಗೆ ಇಷ್ಟವಿಲ್ಲ. ಆದ್ರೇ ಇದೇ ಪಕ್ಷಿಗಳನ್ನು ವಿಚಿತ್ರವಾಗಿ ಕೊಲ್ಲುವ ವಿಕೃತರು ಇದ್ದಾರೆ ಅಂದ್ರೆ ನಂಬಲೇಬೇಕು.
Advertisement
ಹೌದು. ಹೆಸರಘಟ್ಟದ ವಿಶಾಲ ಕೆರೆಯ ತೀರದಲ್ಲಿ ದೇಶವಿದೇಶದ ಅಪರೂಪ ಪಕ್ಷಿಗಳನ್ನು ಕೆಲ ವಿಕೃತರು ಡ್ರೋನ್ ಕ್ಯಾಮೆರಾದ ಮೂಲಕ ಕೊಲ್ಲುತ್ತಿದ್ದಾರೆ ಎನ್ನಲಾಗಿದೆ. ಹಸಿರು ಬಣ್ಣದ, ಪಕ್ಷಿಗಳಂತೆ ಕಾಣುವ ಕಲರ್ ಆಟಿಕೆಯ ಡ್ರೋನ್ ಗಳನ್ನು ಪಕ್ಷಿಗಳ ಸಮೀಪ ಹಾರಿಸಿ ಪಕ್ಷಿಗಳನ್ನು ಸೆಳೆಯುತ್ತಾರೆ. ಅದು ಪಕ್ಷಿಗಳ ರೆಕ್ಕೆಗೆ ತಗುಲಿ ಸಾವನ್ನಪ್ಪುತ್ತಿದೆ ಅಂತಾ ವನ್ಯಜೀವಿ ಪರಿಪಾಲಕರು ಹೇಳಿದ್ದಾರೆ.
Advertisement
Advertisement
ಕೇವಲ ಪಕ್ಷಿಗಳು ಮಾತ್ರವಲ್ಲ ಹೆಸರಘಟ್ಟ ಸುತ್ತಾಮುತ್ತ ನಾಯಿ, ಹಸುಗಳಿಗೂ ಈ ಡ್ರೋನ್ ಕ್ಯಾಮೆರಾದ ಬ್ಯಾಟರಿಗಳು ತಗುಲಿ ಸಾವನ್ನಪ್ಪಿವೆ. ಮೋಜು ಮಸ್ತಿಯ ಶೋಕಿಯಿಂದ ಇಲ್ಲಿನ ಜನ ನೆಮ್ಮದಿಯಿಂದ ಇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.