ಶಿವಮೊಗ್ಗ: ಕೊರೊನಾ ವೈರಸ್ ಭೀತಿಯ ಜೊತೆಯಲ್ಲೇ ಶಿವಮೊಗ್ಗದ ಜನತೆಗೆ ಹಕ್ಕಿಜ್ವರದ ಭೀತಿ ಎದುರಾಗಿದೆ. ನಗರದ ಬಿ.ಎಚ್.ರಸ್ತೆಯಲ್ಲಿರುವ ಸರಕಾರಿ ಡಯಟ್ ಕಾಲೇಜಿನಲ್ಲಿ ಇಂದು ಮೂರು ಹಕ್ಕಿಗಳು ಮೃತಪಟ್ಟಿದ್ದು ಕಾಲೇಜಿನ ಸುತ್ತಮುತ್ತಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಂಡು ಎರಾನ್ ಎಂಬ ಜಾತಿಗೆ ಸೇರಿದ ಮೂರು ಹಕ್ಕಿಗಳು ಕಾಲೇಜಿನ ಆವರಣದಲ್ಲೇ ಸತ್ತು ಬಿದ್ದಿವೆ. ಹಕ್ಕಿಗಳು ಮೃತಪಟ್ಟಿರುವ ಬಗ್ಗೆ ಕಾಲೇಜಿನ ಸಿಬ್ಬಂದಿ ಪಶು ವೈದ್ಯರಿಗೆ ತಿಳಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಹಕ್ಕಿಗಳ ಮೃತದೇಹ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಈ ಹಕ್ಕಿಗಳು ಸಹಜ ರೀತಿಯಲ್ಲಿ ಮೃತಪಟ್ಟಿವೆ. ಈ ಬಗ್ಗೆ ನಾಗರೀಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಮೃತ ಹಕ್ಕಿಗಳನ್ನು ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸುತ್ತೇವೆ. ಈಗಾಗಿ ವರದಿ ಬಂದ ನಂತರ ಈ ಹಕ್ಕಿಗಳು ಜ್ವರದಿಂದ ಮೃತಪಟ್ಟಿದ್ದ, ಅಥವಾ ಇಲ್ಲವೋ ಎಂಬುದನ್ನು ವರದಿ ಬಂದ ನಂತರ ತಿಳಿಸುವುದಾಗಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಜಯಪ್ರಕಾಶ್ ತಿಳಿಸಿದ್ದಾರೆ.