ತಿರುವನಂತಪುರಂ: 135 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ (Air India Flight) ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿಯೊಂದು (Bird) ಬಡಿದ ಹಿನ್ನೆಲೆ ತುರ್ತು ಭೂಸ್ಪರ್ಶ (Emergency Landing) ಮಾಡಿರುವ ಘಟನೆ ಕೇರಳದ (Kerala) ಕಣ್ಣೂರಿನಲ್ಲಿ (Kannur) ಸೋಮವಾರ ನಡೆದಿದೆ.
ಕೋಝಿಕ್ಕೋಡ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದಕ್ಕೆ ಹಕ್ಕಿಯೊಂದು ಬಡಿದಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ
Advertisement
Advertisement
ವಿಮಾನದಲ್ಲಿದ್ದ 135 ಪ್ರಯಾಣಿಕರಲ್ಲಿ 85 ಜನ ಕೋಝಿಕ್ಕೋಡ್ ಹಾಗೂ 50 ಮಂದಿ ಕಣ್ಣೂರಿನವರಾಗಿದ್ದಾರೆ. ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ. ವಿದೇಶಕ್ಕೆ ಹೋಗುವ ಪ್ರಯಾಣಿಕರಿಗೆ ಇತರ ವಿಮಾನಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ದೆಹಲಿಗೆ ಹೋಗುವ ಪ್ರಯಾಣಿಕರನ್ನು ಕಣ್ಣೂರಿನ ಹೋಟೆಲ್‌ಗಳಲ್ಲಿ ಇರಿಸಲಾಗಿದೆ. ಮಂಗಳವಾರ ಅವರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು