ಚಿತ್ರದುರ್ಗ: ರಾಜ್ಯಾದ್ಯಂತ ಹಕ್ಕಿಜ್ವರದ (Bird Flu) ಭೀತಿ ಕಾಡುತ್ತಿದೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಹಕ್ಕಿಜ್ವರ ತಾಂಡವವಾಡುತ್ತಿರುವ ಪರಿಣಾಮ ಅಲರ್ಟ್ ಆಗಿರುವ ಚಿತ್ರದುರ್ಗ ಜಿಲ್ಲಾಡಳಿತ (Chitradurga District Administration) ಕೋಳಿ ಫಾರಂಗಳಲ್ಲಿ (Poultry) ಹಕ್ಕಿಜ್ವರ ಹರಡದಂತೆ ಜಾಗೃತಿ ಮೂಡಿಸಿದೆ.
ಹಕ್ಕಿಜ್ವರವನ್ನು ಎದುರಿಸಲು ಸಜ್ಜಾಗಿರುವ ಜಿಲ್ಲೆಯ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು, ಚಿತ್ರದುರ್ಗ ತಾಲೂಕಿನ ದಂಡಿನ ಕುರುಬರಹಟ್ಟಿಯ ಕರ್ನಾಟಕ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರದ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ನಡೆಸಿದ್ದು, ಫಾರಂನಲ್ಲಿನ ಸ್ವಚ್ಛತಾ ವ್ಯವಸ್ಥೆ ಹಾಗೂ ಹಕ್ಕಿಜ್ವರ ಹರಡದಂತೆ ಅಲ್ಲಿನ ಸಿಬ್ಬಂದಿಗಳು ಕೈಗೊಂಡಿರುವ ಮುಂಜಾಗ್ರತೆಯನ್ನು ಗಮನಿಸಲಾಯಿತು. ಇದನ್ನೂ ಓದಿ: ಕೊಡಗಿನಲ್ಲೂ ಹಕ್ಕಿ ಜ್ವರದ ಭೀತಿ – ಬಿರಿಯಾನಿ ಹೋಟೆಲ್‌ಗಳು ಖಾಲಿ ಖಾಲಿ!
ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹಕ್ಕಿಜ್ವರ ದಿನದಿನಕ್ಕೂ ಮಿತಿಮೀರುತ್ತಿರುವ ಪರಿಣಾಮ ಆಂಧ್ರ ಗಡಿಭಾಗದಲ್ಲಿರುವ ಚಿತ್ರದುರ್ಗದಲ್ಲೂ ಹಕ್ಕಿಜ್ವರದ ಭೀತಿ ಶುರುವಾಗಿದೆ. ಹೀಗಾಗಿ ಕುಕ್ಕುಟೋದ್ಯಮದ ಮೇಲಿನ ಎಫೆಕ್ಟ್ ತಗ್ಗಿಸಲು ಪಶುಸಂಗೋಪನೆ ಇಲಾಖೆಅಧಿಕಾರಿಗಳು ಮುಂದಾಗಿದ್ದು, ಜಿಲ್ಲೆಯ 337 ಕೋಳಿ ಫಾರಂಗಳು, 307 ಮಾಂಸದ ಫಾರಂ ಹಾಗೂ 35 ಮೊಟ್ಟೆ ಕೋಳಿ ಫಾರಂಗಳಿಗೆ ಭೇಟಿ ನೀಡಿ ಹಕ್ಕಿಜ್ವರದ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 10 ದಿನ ಕಳೆದ್ರೂ ಸಂಪರ್ಕಕ್ಕೆ ಸಿಗದ 8 ಕಾರ್ಮಿಕರು
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಎದ್ದಲಬೊಮ್ಮಯ್ಯನಹಟ್ಟಿ, ಚಳ್ಳಕೆರೆಯ ನಾಗಪ್ಪನಳ್ಳಿ ಗೇಟ್ ಹಾಗೂ ಹಿರಿಯೂರಿನ ಪಿಡಿ ಕೋಟೆ ಗಡಿಭಾಗದಲ್ಲಿ ಮೂರುಕಡೆ ಚೆಕ್ ಪೋಸ್ಟ್‌ಗಳನ್ನು ತೆರೆದಿದ್ದು, ಹೊರ ರಾಜ್ಯದ ಕೋಳಿ ಹಾಗೂ ಮೊಟ್ಟೆಗಳು ಚಿತ್ರದುರ್ಗಕ್ಕೆ ಎಂಟ್ರಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್
ಜೊತೆಗೆ ಕೋಳಿ ಫಾರಂಗಳಲ್ಲೂ ಸಹ ಹಕ್ಕಿಜ್ವರ ಹರಡದಂತೆ ಮುಂಜಾಗ್ರತೆ ವಹಿಸಿದ್ದು, ಸ್ವಚ್ಛತೆಯೊಂದಿಗೆ, ಫಾರಂ ಸುತ್ತಲು ಆಗಾಗ್ಗೆ ಔಷಧಿ ಸಿಂಪಡಿಸುವಂತೆ ಫಾರಂ ಮಾಲೀಕರಿಗೆ ತಿಳಿಸಲಾಗಿದೆ. ಅಲ್ಲದೇ ಆಂಧ್ರ ಗಡಿಭಾಗದಿಂದ ಹಕ್ಕಿಜ್ವರ ಶುರುವಾದ ಬೆನ್ನಲ್ಲೇ ಹೊರರಾಜ್ಯದಿಂದ ಬರುವ ಕೋಳಿಗಳು, ಮೊಟ್ಟೆ ಹಾಗೂ ಕೋಳಿಗಳ ಆಹಾರ ಸಾಗಾಟಕ್ಕೆ ಕೋಟೆನಾಡಲ್ಲಿ ಬ್ರೇಕ್ ಹಾಕಲಾಗಿದೆ. ಇದನ್ನೂ ಓದಿ: ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ
ಫಾರಂ ಮಾಲೀಕರು ಹಾಗೂ ಸಿಬ್ಬಂದಿ ಕೂಡ ಹಕ್ಕಿಜ್ವರ ತಡೆಯಲು ಅಧಿಕಾರಿಗಳೊಂದಿಗೆ ಕೈ ಜೋಡಿಸಿದ್ದಾರೆ. ಹಕ್ಕಿಜ್ವರ ಹರಡದಂತೆ ತಡೆಯಲು ಫೀಡಿಂಗ್, ಸ್ವಚ್ಛತೆಗೆ ಆದ್ಯತೆ ನೀಡಿರುವುದಾಗಿ ಪೌಲ್ಟ್ರಿ ಸಿಬ್ಬಂದಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ