ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ (Chikkaballapur) ಹಕ್ಕಿ ಜ್ವರ (Bird flu) ಇರುವುದು ದೃಢಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಭೂಪಾಲ್‍ನ ಪ್ರಯೋಗಾಲಯ ನೀಡಿದ ವರದಿಯಿಂದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ. ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರಬಹುದು. ರೋಗನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ
ಗ್ರಾಮದಲ್ಲಿರುವ ಇತರೆ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಗುವುದು. ವರದಹಳ್ಳಿ ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ಕೋಳಿಗಳನ್ನು ಪಡೆದು ನಿಯಾಮಾನುಸಾರ ನಿಗದಿತ ಏರಿಯಾದಲ್ಲಿ ಕೋಳಿಗಳ ಹತ್ಯೆ ಮಾಡಿ ಮುಚ್ಚಿ ಹಾಕುತ್ತೇವೆ. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ICC Champions Trophy | ಟೂರ್ನಿಯಿಂದ ಔಟ್ ಆದ್ರೂ ಪಾಕ್‌ಗೆ ಸಿಕ್ತು ನಗದು ಬಹುಮಾನ