ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಪ್ರೇಮಿಗಳ ದಿನದಂದು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೆ ಮುತ್ತು ನೀಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಬಿಪಾಶಾ ತಮ್ಮ ಪತಿ ಕರಣ್ ಬರೆದಿರುವ ಪ್ರೇಮ ಪತ್ರವನ್ನು ಓದುತ್ತಿದ್ದಾರೆ. ಬಳಿಕ ಖುಷಿಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತು ನೀಡಿದ್ದಾರೆ. ಈ ವಿಡಿಯೋ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
- Advertisement
ಈ ವಿಡಿಯೋವನ್ನು ಬಿಪಾಶಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ನಾನು ಈ ದಿನಕ್ಕಾಗಿ ಪ್ರತಿ ವರ್ಷ ಕಾಯುತ್ತೇನೆ. ನಾನು ಪ್ರಪಂಚದ ಲಕ್ಕಿಯೆಷ್ಟ್ ಮಹಿಳೆ. ಕರಣ್ ನನಗೆ ಪ್ರತಿ ದಿನ ಪ್ರತಿ ಕ್ಷಣ ಸ್ಪೆಷಲ್ ಆಗಿ ಫೀಲ್ ಮಾಡಿಸುತ್ತಾನೆ” ಎಂದು ಬರೆದುಕೊಂಡಿದ್ದರು.
- Advertisement
ಬಿಪಾಶಾ ಬಸು ಅವರ ‘ಅಲೋನ್’ ಸಿನಿಮಾಗೆ ಕರಣ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ ವೇಳೆ ಇಬ್ಬರ ನಡುವೆ ಪ್ರೀತಿಯಲ್ಲಿ ಬೆಳೆದಿತ್ತು. ಬಳಿಕ 2016ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv