ಲಾಹೋರ್: ಪಾಕಿಸ್ತಾನದಲ್ಲಿ ಸಚಿವಾಲಯದ ಶೌಚಾಲಯಕ್ಕೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೆಳವರ್ಗದ ನೌಕರರು ಸೇರಿದಂತೆ ಸಾರ್ವಜನಿಕರು ಸಚಿವಾಲಯದ ಶೌಚಾಲಯ ಬಳಸುವಂತಿಲ್ಲ. ಹೀಗಾಗಿ ವಿಐಪಿ ಮತ್ತು ಗ್ರೇಡ್ ಒನ್ ಅಧಿಕಾರಿಗಳಿಗಾಗಿ ಈ ಶೌಚಾಲಯ ಮೀಸಲಿರಿಸಲಾಗಿದೆ.
ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲು ಪ್ರಧಾನಿ ಇಮ್ರಾನ್ ಖಾನ್ ದೊಡ್ಡ ಬಂಗಲೆ ತೊರೆದು ಸಾಧಾರಣ ಫ್ಲ್ಯಾಟ್ ನಲ್ಲಿ ಇದ್ದಾರೆ. ಆದರೆ ಅವರ ಸಚಿವ ಸಂಪುಟದ ಅಧಿಕಾರಿಗಳು ವಿಐಪಿ ಸಂಸ್ಕೃತಿಯನ್ನು ಬಿಟ್ಟು ಹೊರ ಬಂದಿಲ್ಲ. ಬಯೋಮೆಟ್ರಿಕ್ ಅಳವಡಿಸಲಾಗಿರುವ ಶೌಚಾಲಯಗಳನ್ನು ಕೇವಲ ಸಹಾಯಕ ಕಾರ್ಯದರ್ಶಿಗಳು ಮತ್ತು ಗ್ರೇಡ್ ಅಧಿಕಾರಿಗಳು ಮಾತ್ರ ಬಳಸಬಹುದಾಗಿದೆ. ಉಳಿದಂತೆ ಸಚಿವಾಲಯದ ಇತರೆ ಸಿಬ್ಬಂದಿ ಹೊರಗಿನ ಸಾರ್ವಜನಿಕ ಶೌಚಾಲಯ ಬಳಸಬೇಕಿದೆ.
ಸಾರ್ವಜನಿಕ ಶೌಚಾಲಯದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ, ಟಿಶ್ಯೂ ಪೇಪರ್ ಸಹ ಇಡುವುದಿಲ್ಲ ಎಂದು ಸಚಿವಾಲಯದ ಕೆಳಹಂತದ ಅಧಿಕಾರಿಗಳು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.