ಸಿನಿಮಾ ಹೊರತುಪಡಿಸಿದರೆ ಸಾಮಾನ್ಯವಾಗಿ ರಚಿತಾ ರಾಮ್ ಕಾಣಿಸ್ಕೊಳ್ಳೋದು ಸಾಂಪ್ರದಾಯಿಕ ಉಡುಗೆಯಲ್ಲೇ. ಅದಕ್ಕೆ ಮುಖ್ಯ ಕಾರಣ ಅವರು ಹೆಚ್ಚಾಗಿ ಹಣೆಗೆ ಬಿಂದಿ ಇಡ್ತಾರೆ. ಇದೀಗ ರಚಿತಾ ಬಿಂದಿ ಮಹತ್ವ ಹಾಗೂ ತಮಗ್ಯಾಕೆ ಬಿಂದಿ ಇಡುವುದು ಇಷ್ಟ ಎಲ್ಲವನ್ನ ಇನ್ಸ್ಟಾಗ್ರಾಂ ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ. ದೇವರ ಮುಂದೆ ಕುಳಿತು ಸೆಲ್ಫಿ ತೆಗೆದುಕೊಂಡ ರಚಿತಾ ಆ ಫೋಟೋಗಳನ್ನ ಪೋಸ್ಟ್ ಮಾಡಿ ಬಿಂದಿ ಬಗ್ಗೆ ಸ್ಪೆಷಲ್ ಆಗಿ ಬರೆದುಕೊಂಡಿದ್ದಾರೆ.
ಹಣೆಗೆ ಬಿಂದಿಯಿಟ್ಟ ಫೋಟೋ ಶೇರ್ ಮಾಡಿ ಬಿಂದಿಯ ಮಹತ್ವವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ರಚಿತಾ ರಾಮ್ `ನನಗೆ ದೊಡ್ಡ ಬಿಂದಿ ಧರಿಸೋದ್ರ ಕಡೆ ತುಂಬಾ ಇಂಟ್ರೆಸ್ಟ್ ಇದೆ. ಬಿಂದಿ ನನ್ನನ್ನು ಸೊಗಸಾಗಿ ಕಾಣುವಂತೆ ಮಾಡುತ್ತೆ. ನನ್ನ ಲುಕ್ ಅನ್ನು ಬಿಂದಿ ಪೂರ್ಣಗೊಳಿಸುತ್ತದೆ’ ಎಂದಿದ್ದಾರೆ. ಅಂದಹಾಗೆ ಇದು ಹಬ್ಬದ ದಿನ ತೆಗೆದ ಸೆಲ್ಫಿ ಫೋಟೋ ಎಂದು ಭಾವಿಸಲಾಗ್ತಿದೆ.
ಹಣೆಯಲ್ಲಿ ಬಿಂದಿ ಇಡೋದನ್ನ ಇತ್ತೀಚೆಗೆ ಔಟ್ ಆಫ್ ಸ್ಟೈಲ್ ಎಂದು ಹಲವರು, ಅದರಲ್ಲೂ ಹೆಣ್ಮಕ್ಕಳು ಇಡೋದೇ ಅಪರೂಪವಾಗಿರುವ ವೇಳೆ ರಚಿತಾ ಬಿಂದಿ ತಮಗೆ ಕಂಫರ್ಟ್ ಎಂದಿದ್ದಾರೆ. ರಚಿತಾ ಬಿಂದಿ ಪ್ರೀತಿಗೆ ನೆಟ್ಟಿಗರಂತೂ ಫಿದಾ ಆಗಿದ್ದಾರೆ.