ಲಂಡನ್: ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಅವರ ದತ್ತಿ ಟ್ರಸ್ಟ್‌ಗೆ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್-ಖೈದಾ ಸ್ಥಾಪಕ ಒಸಾಮಾ ಬಿನ್ ಲಾಡೆನ್‌ನ ಕುಟುಂಬ ಭಾರೀ ಮೊತ್ತದ ದೇಣಿಗೆ ನೀಡಿದೆ. ಪ್ರಿನ್ಸ್ ಚಾರ್ಲ್ಸ್‌ನ ಚಾರಿಟೆಬಲ್ ಟ್ರಸ್ಟ್ 1 ಮಿಲಿಯನ್ ಪೌಂಡ್(ಸುಮಾರು 9 ಕೋಟಿ ರೂ.) ದೇಣಿಗೆಯನ್ನು ಪಡೆದಿದೆ ಎಂದು ವರದಿಯಾಗಿದೆ.
ಬಿನ್ ಲಾಡೆನ್ ಕುಟುಂಬದ ಸದಸ್ಯರು ಯಾವುದೇ ತಪ್ಪು ಮಾಡಿಲ್ಲ ಎಂಬ ಸಲಹೆ ಇಲ್ಲದಿದ್ದರೂ ಇದೀಗ 73 ವರ್ಷಗಳ ಪ್ರಿನ್ಸ್ ಚಾರಿಟಿ ಸಂಸ್ಥೆ ದೇಣಿಗೆಯನ್ನು ಪಡೆದು, ಕ್ರಿಮಿನಲ್ ಅಪರಾಧಗಳ ಆರೋಪದ ಮೇಲೆ ಪರಿಶೀಲನೆಗೆ ಒಳಗಾಗಿದೆ. ಪ್ರಿನ್ಸ್ ಚಾರ್ಲ್ಸ್‌ನ ಸಲಹೆಗಾರರು, ಒಸಾಮಾ ಬಿನ್ ಲಾಡೆನ್‌ಗೆ ಸಂಬಂಧಿಸಿದ ಯಾರಿಂದಲೂ ಹಣ ಪಡೆಯದಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿಯಿಂದಾಗಿ ನೀವೆಲ್ಲರೂ ಬದುಕಿದ್ದೀರಿ – ಲಸಿಕೆ ಪಡೆದ ಜನತೆಗೆ ಬಿಹಾರ ಸಚಿವ ಮಾತು
2013ರಲ್ಲಿ ಚಾರ್ಲ್ಸ್ ಒಸಾಮಾಗೆ ಸಂಬಂಧಿಸಿದವರನ್ನು ಭೇಟಿಯಾಗಿದ್ದಾಗ ಪ್ರಿನ್ಸ್ ಆಫ್ ವ್ಹೇಲ್ಸ್ ಚಾರಿಟೆಬಲ್ ಫಂಡ್(ಪಿಡಬ್ಲ್ಯುಸಿಎಫ್)ಗೆ ಹಣ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಆಗಿನ 5 ಟ್ರಸ್ಟಿಗಳು ದತ್ತಿ ಸ್ವೀಕರಿಸುವುದಕ್ಕೆ ಒಪ್ಪಿಗೆ ನೀಡಿದ್ದರು ಎಂದು ಪಿಡಬ್ಲ್ಯುಸಿಎಫ್ ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ