ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಕರಿತಂತೆ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೆ ಸಿಎಂ ನಿವಾಸದ ಕಾಫಿ, ಟೀ, ಬಿಸ್ಕೆಟ್ ನ ಬಿಲ್ ಲಕ್ಷಾಂತರ ರೂ. ಆಗಿದ್ದು ಎಲ್ಲರ ಹುಬ್ಬೇರಿಸಿತ್ತು. ಸಿಎಂ ಸೇರಿದಂತೆ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡೋದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ? ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.
Advertisement
ಕಾಫಿ- ಟೀಗೆ, ಜಿಮ್ ವಸ್ತುಗಳಿಗೆ, ಸೋಪು-ಟವಲ್‍ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಸಿಎಂ ದುಬಾರಿ ದುನಿಯಾದ ಭಾಗ ಮುಂದುವರೆದಿದೆ. 4 ವರ್ಷಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮುಕ್ಕಾಲು ಕೋಟಿ. ಅರ್ಥಾತ್ 71 ಲಕ್ಷ ರೂಪಾಯಿ.
Advertisement
Advertisement
2013 ಮೇ 13 ರಂದು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಕೇವಲ 5 ನಿಮಿಷ ನಡೆದ ಈ ಕಾರ್ಯಕ್ರಮಕ್ಕೆ ಖರ್ಚಾಗಿದ್ದು 35 ಲಕ್ಷ ರೂ. ಎಲ್‍ಇಡಿ ಪರದೆ, ಗಣ್ಯರ ಚೇರ್, ಶೌಚಾಲಯಕ್ಕೆ ರಾಮನ ಲೆಕ್ಕ ತೋರಿಸಿ ಇಷ್ಟು ಬಿಲ್ ಮಾಡಿದ್ದಾರೆ. ಸಿಎಂ ದುಬಾರಿ ವೆಚ್ಚದ ಬಗ್ಗೆ ಮಾಹಿತಿ ಹಕ್ಕು ಕಾಯ್ಡೆಯಡಿ ಬಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲೀಪಾಟೀಲ್ ಆರ್‍ಟಿಐ ಅಡಿ ಈ ಮಾಹಿತಿ ಪಡೆದಿದ್ದಾರೆ.
Advertisement
ಸಿಎಂ ಕಥೆ ಇಷ್ಟಾದ್ರೆ ಇನ್ನು ತಮ್ಮ ಸಂಪುಟದ ಸದಸ್ಯರ ಪ್ರಮಾಣ ವಚನಕ್ಕೆ ಖರ್ಚಾಗಿದ್ದು 40 ಲಕ್ಷ ರೂ. ಈ ಎಲ್ಲಾ ಕಾರ್ಯಕ್ರಮಗಳು ನಡೆದಿರೋದು ರಾಜಭವನದ ಗಾಜಿನ ಮನೆಯಲ್ಲಿ. 9 ಭಾರಿ ನಡೆದಿರೋ ಕಾರ್ಯಕ್ರಮಕ್ಕೆ ಗಣ್ಯರ ಖುರ್ಚಿಗಳು, ಎಲ್‍ಇಡಿ ಪರದೆ, ಧ್ವನಿವರ್ಧಕ ಅಂತ ಲೆಕ್ಕ ತೋರಿಸಿ 40 ಲಕ್ಷ ಬಿಲ್ ಮಾಡಿದ್ದಾರೆ. ಅದು ಇತ್ತೀಚೆಗೆ ನಡೆದ 3 ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಹೊರತುಪಡಿಸಿ ಆಗಿರೋ ಖರ್ಚು.
ಇದನ್ನೂ ಓದಿ: ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!