ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.
ಬಿಲ್ ಗೇಟ್ಸ್ ಅವರು ಸಂಪೂರ್ಣ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಈಗ ಕೋವಿಡ್‌ಗೆ ಒಳಗಾಗಿದ್ದು, ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ
Advertisement
I've tested positive for COVID. I'm experiencing mild symptoms and am following the experts' advice by isolating until I'm healthy again.
— Bill Gates (@BillGates) May 10, 2022
Advertisement
ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ನಾನು ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ನಾನು ಮತ್ತೆ ಗುಣಮುಖನಾಗುವವರೆಗೆ ಪ್ರತ್ಯೇಕವಾಗಿರುವುದರ ಮೂಲಕ ತಜ್ಞರ ಸಲಹೆಯನ್ನು ಅನುಸರಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಬಿಲ್ ಗೇಟ್ಸ್ ತಿಳಿಸಿದ್ದಾರೆ.
Advertisement
‘ಅದೃಷ್ಟವಶಾತ್ ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ. ಉತ್ತಮ ಚಿಕಿತ್ಸೆ ಪಡೆಯುವ ಅವಕಾಶಗಳು ಇರುವುದು ನನ್ನನ್ನು ಭಯ ಮುಕ್ತನನ್ನಾಗಿ ಮಾಡಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ವರ್ಣಚಿತ್ರ ದಾಖಲೆ ಬೆಲೆಗೆ ಮಾರಾಟ
Advertisement
ಬಿಲ್ ಗೇಟ್ಸ್ ಅವರು ಕೋವಿಡ್–19 ನಂತರ ಜಗತ್ತಿನ ಅನೇಕ ಬಡ ರಾಷ್ಟ್ರಗಳಿಗೆ ಲಸಿಕೆ ಹಾಗೂ ಆರೋಗ್ಯ ಸಲಕರಣೆಗಳಿಗೆ ಉದಾರ ದಾನ ನೀಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಔಷಧಗಳ ಖರೀದಿಗಾಗಿ ಬಡ ರಾಷ್ಟ್ರಗಳಿಗೆ 120 ಮಿಲಿಯನ್ ಡಾಲರ್ ನೀಡುವುದಾಗಿ ತಿಳಿಸಿದ್ದಾರೆ.