ಹಾಲಿ, ಮಾಜಿ ಸಿಎಂಗಳ ಹೆಲಿಕಾಪ್ಟರ್ ಜಾತಕ! ಯಾರ ಅವಧಿಯಲ್ಲಿ ಎಷ್ಟು ಕೋಟಿ ಖರ್ಚಾಗಿದೆ?

Public TV
2 Min Read
bsy dvs shettarsiddu

ಬೆಂಗಳೂರು: ತಮ್ಮ ತಪ್ಪು ಮುಚ್ಚಿಕೊಳ್ಳಲು ರಾಜಕಾರಣಿಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಹೊಸದಲ್ಲ. ಎಲ್ಲರೂ ಒಂದೇ ದೋಣಿಯಲ್ಲಿ ಪಯಣ ಮಾಡುವ ಮುಖಂಡರೇ. ಇದಕ್ಕೆ ಉದಾಹರಣೆ ಹೆಲಿಕಾಪ್ಟರ್ ಪ್ರಯಾಣದ ಖರ್ಚು ವೆಚ್ಚಗಳು.

ಹೌದು. ದಲಿತ ಮನೆಯಲ್ಲಿ ಊಟ ಮಾಡಿದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಾಲೆಳೆದಿದ್ರು. ಇದಕ್ಕೆ ಯಡಿಯೂರಪ್ಪ ಸಿಎಂ ಮೊದಲು ಹೆಲಿಕಾಪ್ಟರ್ ಸುತ್ತೋದು ಬಿಟ್ಟು ಜನರ ಬಳಿ ಹೋಗಲಿ ಅಂತ ಟಾಂಗ್ ನೀಡಿದ್ರು. ಹೀಗಾಗಿ ಹೆಲಿಕಾಪ್ಟರ್ ವಿಚಾರದಲ್ಲಿ ಯಾರು ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿ ಈಗ ಆರ್‍ಟಿಐ ಅಡಿಯಲ್ಲಿ ಸಿಕ್ಕಿದೆ.

ಸಿದ್ದು ಮೇಲೆ ಆರೋಪ ಮಾಡೋ ಯಡಿಯೂರಪ್ಪನವರೇ ತಾವು ಮುಖ್ಯಮಂತ್ರಿಯಾಗಿದ್ದಾಗ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಯಡಿಯೂರಪ್ಪ ಮಾತ್ರವಲ್ಲ ಮುಖ್ಯಮಂತ್ರಿಯಾಗಿ ಸದ್ಯ ಕೇಂದ್ರದಲ್ಲಿ ಮಂತ್ರಿಯಾಗಿರುವ ಡಿವಿ ಸದಾನಂದಗೌಡ ಕೂಡಾ ಕೋಟಿ ಕೋಟಿ ಹಣವನ್ನು ಹೆಲಿಕಾಪ್ಟರ್ ಪ್ರವಾಸಕ್ಕೆ ಹಣ ಖರ್ಚು ಮಾಡಿದ್ರು. ಜಗದೀಶ್ ಶೆಟ್ಟರ್ ಕೂಡಾ ಕೋಟಿಗಳ ವೆಚ್ಚದಲ್ಲಿ ಹೆಲಿಕಾಪ್ಟರ್ ಪ್ರವಾಸ ಮಾಡಿದ್ದಾರೆ.

ಇನ್ನು ಕಾಂಗ್ರೆಸ್‍ನ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಹೆಲಿಕಾಪ್ಟರ್ ಖರ್ಚಿನಲ್ಲಿ ಹಿಂದೆ ಬಿದ್ದಿಲ್ಲ. ಮೂರೇ ವರ್ಷದ ಅವಧಿಯಲ್ಲಿ ಇವರ ಖರ್ಚು ಕೋಟಿ ದಾಟಿದೆ. ಅಸಲಿಗೆ ಹೆಲಿಕಾಪ್ಟರ್ ಬಗ್ಗೆ ಮಾತಾನಾಡುವ ನಾಯಕರು ಎಷ್ಟು ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಆರ್‍ಟಿಐ ಅಡಿಯಲ್ಲಿ ಭಾಸ್ಕರ್ ಅವರು ಕೇಳಿ ಪಡೆದುಕೊಂಡಿದ್ದು ಆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಿದ್ದರಾಮಯ್ಯ: ಮೇ 2013 ರಿಂದ ಜನವರಿ 2016ರ ಅವಧಿಯವರೆಗೆ ಒಟ್ಟು 20.11 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ 2013-14ರಲ್ಲಿ 9.7 ಕೋಟಿ ರೂ., 2014-2015 ರಲ್ಲಿ 5.81 ಕೋಟಿ ರೂ., 2016 ಜನವರಿಯಲ್ಲಿ 4.6 ಕೋಟಿ ರೂ. ಖರ್ಚಾಗಿದೆ.

Helicopter cm siddu

ಬಿ.ಎಸ್.ಯಡಿಯೂರಪ್ಪ: ಮೇ 30, 2008ರಿಂದ ಜುಲೈ 31, 2011 ರವರೆಗಿನ ಅವಧಿಯಲ್ಲಿ ಒಟ್ಟು 42.26 ಕೋಟಿ ರೂ. ವೆಚ್ಚ ಮಾಡಿದ್ದಾರೆ.

helicopter bsy 1 1
ಡಿ.ವಿ.ಸದಾನಂದಗೌಡ: ಆಗಸ್ಟ್ 04, 2011ರಿಂದ ಜುಲೈ 11, 2012ರವರೆಗಿನ ಹೆಲಿಕಾಪ್ಟರ್ ಪ್ರಯಾಣಕ್ಕೆ 13.77 ಕೋಟಿ ರೂ. ಖರ್ಚು ಮಾಡಿದ್ದಾರೆ.

helicopter DVS
ಜಗದೀಶ್ ಶೆಟ್ಟರ್: ಜುಲೈ 12, 2012ರಿಂದ ಮೇ 12,2013ವರೆಗೆ ಒಟ್ಟು 12.78 ಕೋಟಿ ರೂ. ಖರ್ಚು ಮಾಡಿದ್ದಾರೆ.

helicopter shettar

Share This Article
Leave a Comment

Leave a Reply

Your email address will not be published. Required fields are marked *