ಬೆಂಗಳೂರು: ಟೆಂಡರ್ ಕೂಗೋದು, ಟೆಂಡರ್ ಆದ್ಮೇಲೆ ಬಿಲ್ ಬಾಕಿ ವಿಚಾರಗಳು ಆಗಾಗ ಬಿಬಿಎಂಪಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಈಗ ಬಿಬಿಎಂಪಿ (BBMP) ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಗಲಾಟೆಯಾಗಿದೆ. ದಯಮಾಡಿ ಹಣ ಬಿಡುಗಡೆ ಮಾಡಿ ಅಂದ್ರೆ ಅಧಿಕಾರಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂಬ ಪ್ರಕರಣ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದೆ.
ಸೊಳ್ಳೆ ಔಷಧಿ (Mosquito Spray) ಸಿಂಪಡಿಸಿದ ಬಿಲ್ ಕೇಳಿದ್ರೆ ಬಿಬಿಎಂಪಿ ಅಧಿಕಾರಿಗಳು ದರ್ಪ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದ್ದು, ಟೆಂಡರ್ ಕರೆಯದೆ, ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಆಗ್ರಹಿಸಿದಾಗ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ 5 ಕೋಟಿ ಬಿಲ್ ಬಾಕಿಯನ್ನು ಬಿಬಿಎಂಪಿ ಉಳಿಸಿಕೊಂಡಿದೆ. ಈ ಬಿಲ್ ಕ್ಲಿಯರ್ ಮಾಡಲು ಮನವಿ ಮಾಡಿಕೊಳ್ಳಲು ಹೋದಾಗ ಸ್ಪೆಷಲ್ ಕಮಿಷನರ್ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
Advertisement
Advertisement
ನಿನ್ನೆ ಬಾಕಿ ಬಿಲ್ ಕೇಳುವುದಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಕಚೇರಿಗೆ ಹೋದಾಗ ಮಾರ್ಷಲ್‍ಗಳಿಂದ ವಿಶೇಷ ಆಯುಕ್ತರು ನಮ್ಮ ಮೇಲೆ ದೌರ್ಜನ್ಯ ಮಾಡಿ, ಹೊರಗೆ ದೂಡಿದ್ದಾರೆ. ಮ್ಯಾನ್ ಹ್ಯಾಂಡ್ಲಿಂಗ್ ಮಾಡಿಸುವುದರ ಮೂಲಕ ಬಿಬಿಎಂಪಿ ಸ್ಪೆಷಲ್ ಕಮಿಷನರ್ ಜಯರಾಂ ರಾಯ್ಪುರ ದೌರ್ಜನ್ಯ ಮಾಡಿದ್ದಾರೆ. ಹಲವಾರು ದಿನಗಳಿಂದ ಬಿಲ್ ಪಾವತಿಗೆ ಮನವಿ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ನಿನ್ನೆ 30ಕ್ಕೂ ಹೆಚ್ಚು ಸಿಬ್ಬಂದಿ ಬಾಕಿ ಮೊತ್ತ ಪಡೆಯಲು ಹೋದಾಗ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಸ್ತುತ ಸಾಲಿಗೆ 243 ವಾರ್ಡ್‍ಗೆ ಸೊಳ್ಳೆ ಔಷಧಿ ಸಿಂಪಡಣೆ ಟೆಂಡರ್ ಕರೆಯಬೇಕಿದ್ದ ಬಿಬಿಎಂಪಿ, ಇದುವರೆಗೂ ಕರೆದಿಲ್ಲ. ಆದರೆ 198 ವಾರ್ಡ್‍ಗಷ್ಟೇ ಟೆಂಡರ್ ಕರೆದು ಗೋಲ್ಮಾಲ್ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ: ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ಚರ್ಚೆಗೆ ಗ್ರಾಸವಾಯ್ತು ರಘುರಾಮ್ ರಾಜನ್ ಹೇಳಿಕೆ
Advertisement
Advertisement
ಈ ಬಗ್ಗೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, 198 ವಾರ್ಡ್‌ಗಳಿಗೆ ಟೆಂಡರ್ ಕರೆದಿದ್ದೇವೆ. ಈಗ ಹೊಸ ಟೆಂಡರ್ 243 ವಾರ್ಡ್‌ಗಳಿಗೆ ಕರೆಯುತ್ತೇವೆ. ಆದರೆ ಇವರು ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ವೆಕೆಟ್ ಆಗಬೇಕು. ನಂತರವಷ್ಟೇ ಟೆಂಡರ್ ಕರೆಯುತ್ತೇವೆ. ನಾವು ಯಾರನ್ನೂ ತಪ್ಪಾಗಿ ನಡೆಸಿಕೊಂಡಿಲ್ಲ ಎಂದರು. ಇದನ್ನೂ ಓದಿ: ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ