– 14 ದಿನ ಪೊಲೀಸ್ ಕಸ್ಟಡಿಗೆ ಕೇಳಲಿರೋ ಅಧಿಕಾರಿಗಳು
ಬೆಂಗಳೂರು: ಬಿಕ್ಲು ಶಿವ (Biklu Shiva) ಕೊಲೆ ಕೇಸ್‌ಲ್ಲಿ ಅರೆಸ್ಟ್ ಆಗಿರುವ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಯಲಿದ್ದು, ಬಳಿಕ ಕೋರ್ಟ್‌ಗೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕೋರ್ಟ್‌ನಲ್ಲಿ (Court) ವಿಚಾರಣೆಗಾಗಿ 14 ರಿಂದ ಕನಿಷ್ಠ ಐದು ದಿನ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗಿದೆ. ಪ್ರಕರಣದ ಆರೋಪಿಗಳಾದ ಅಜಿತ್, ಬೈರತಿ ಬಸವರಾಜ್ ಇಬ್ಬರು ಕೊಲೆಯಾದ ಬಿಕ್ಲು ಶಿವ ಮಧ್ಯೆ ಸಾಕಷ್ಟು ವ್ಯವಹಾರ ಬಗ್ಗೆ ಮಾಹಿತಿ ಇದೆ. ಈ ವಿಚಾರದ ಬಗ್ಗೆ ತನಿಖೆ ನಡೆಸಲು ಕಸ್ಟಡಿಗೆ ಕೇಳಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್ – ಮಾಜಿ ಸಚಿವ ಬೈರತಿ ಬಸವರಾಜ್ ಅರೆಸ್ಟ್

ಕೊಲೆಯಾದ ರೌಡಿಶೀಟರ್ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಆರೋಪಿ ಜಗದೀಶ್ ನನಗೆ ಪರಿಚಯ ಇಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದರು. ಆದರೆ ಜಗದೀಶ್ ಜೊತೆಗೆ ಕಾರ್ಯಕ್ರಮಗಳು, ಬರ್ತಡೇ, ದೇವಸ್ಥಾನ ಗಳಿಗೆ ಜೊತೆಗೆ ಹೋಗಿರೋದು ಪತ್ತೆಯಾಗಿದೆ.
ಈ ಹಿಂದೆಯೇ ಬೈರತಿ ಬಸವರಾಜ್ ಮತ್ತು ಬಿಕ್ಲು ಶಿವನಿಗೆ ಹಲವು ಬಾರಿ ಜಮೀನು ವಿವಾದಗಳಲ್ಲಿ ಗಲಾಟೆ ಆಗಿತ್ತು. ಇದಕ್ಕೆ ಪೂರಕವಾಗಿ ಅವಲಹಳ್ಳಿ, ಕೆಆರ್ ಪುರ, ಭಾರತೀನಗರ ಪೊಲೀಸ್ ಠಾಣೆಯಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರು ದಾಖಲಾಗಿತ್ತು. ಇದನ್ನೂ ಓದಿ: ಶಾಸಕ ಬೈರತಿ ಬಸವರಾಜ್‌ಗೆ ಶಾಕ್ – ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಹೇಗಿರಲಿದೆ ವೈದ್ಯಕೀಯ ಪರೀಕ್ಷೆ?
– ಜನರಲ್ ಕ್ಲಿನಿಕಲ್ ಎಕ್ಸಾಮಿನೇಷನ್
– ಮೊದಲು ಭೈರತಿ ಬಸವರಾಜರಿಗೆ ಏನಾದ್ರೂ ಆರೋಗ್ಯ ಸಮಸ್ಯೆ ಇದ್ರೇ ಮಾಹಿತಿ
– ಯಾವುದಾದ್ರೂ ಮೆಡಿಕೇಷನ್ ಅಲ್ಲಿ ಇದ್ದಾರಾ ಎಂದು ಮಾಹಿತಿ
– ಬಿಪಿ, ಶುಗರ್ ಸಂಬಂಧಪಟ್ಟಂತೆ ಮಾತ್ರೆ ತೆಗೆದುಕೊಳ್ಳುತ್ತಿರುವ ಮಾಹಿತಿ
– ಬಿಪಿ, ಶುಗರ್, ಇಸಿಜಿ ಪರೀಕ್ಷೆ
– ಯಾವುದಾದ್ರೂ ಆರೋಗ್ಯ ಸಮಸ್ಯೆ ಇದ್ರೇ ಚಿಕಿತ್ಸೆಗೆ ಸೂಚನೆ

