ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್

Public TV
1 Min Read
Rachita Ram

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ (Biklu Shiva Murder Case) ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಕೊಲೆ ಪ್ರಕರಣದ ಎ1 ಆರೋಪಿ ಜಗ್ಗ ಅಲಿಯಾಸ್‌ ಜಗದೀಶ್ ನಟಿ ರಚಿತಾ ರಾಮ್‌ಗೆ (Rachita ram) ಭರ್ಜರಿ ಗಿಫ್ಟ್‌ ಕೊಟ್ಟಿರುವುದು ಬೆಳಕಿಗೆ ಬಂದಿದೆ.

Rachita Ram 2

ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್‌ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ನೀಡಿರುವ ಫೋಟೋ ವೈರಲ್‌ ಆಗಿದೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್‌ ವೇಳೆ ಜಗ್ಗ ನಟಿಗೆ ಈ ಉಡುಗೊರೆಯನ್ನ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್‌ (Ravichandran) ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೊಲೆ ಆರೋಪಿಗೆ ಸಿನಿ ನಂಟಿರುವುದು ಗೊತ್ತಾಗಿದೆ. ಇದನ್ನೂ ಓದಿ: ಕಲಬುರಗಿ | ಜೂಜಾಡುತ್ತಿದ್ದ ಕಾಂಗ್ರೆಸ್, ಬಿಜೆಪಿ ಮುಂಖಂಡರ ಸಹಿತ 7 ಮಂದಿ ಅರೆಸ್ಟ್

Rachita Ram 3

ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನ ವಿಚಾರಣೆಗೂ ಒಳಪಡಿಸಿದ್ದರು. ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ತನಿಖಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ಎ1 ಜಗ್ಗದೀಶ್‌ ಸಹಚರರಾದ ಅನಿಲ್, ಅರುಣ್ ಹಾಗೂ ನವೀನ್‌ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಬಳಿಕ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ಹೋಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಂಗ್ರೆಸ್ ಸ್ಟೂಡೆಂಟ್ ಲೀಡರ್ ಅರೆಸ್ಟ್

ಏನಿದು ಪ್ರಕರಣ?
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಶಿವಪ್ರಕಾಶ್‌ನನ್ನು (ಬಿಕ್ಲು ಶಿವ) ಹಲಸೂರು ಮನೆಯ ಎದುರು ಜುಲೈ 15ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳಾದ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್‌ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಪ್ರಕರಣದ ಎ5 ಆರೋಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಶನಿವಾರ ವಿಚಾರಣೆ ಮಾಡಲಾಗಿತ್ತು. ಇದನ್ನೂ ಓದಿ: ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ – ಲಾಂಗ್ ಹಿಡಿದು ರೌಡಿಶೀಟರ್ ಪುಂಡಾಟ

Share This Article