ತೈಪೆ: ಬಿಕಿನಿ ಕ್ಲೈಂಬರ್ ಎಂದೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಯುವತಿಯೊಬ್ಬಳು ಪರ್ವತ ಏರುತ್ತಿರುವಾಗ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾಳೆ.
ತೈವಾನ್ ದೇಶದ ತೈಪೆ ನಗರ ನಿವಾಸಿ ಗಿಗಿ ವೂ (36) ಮೃತ ಬಿಕಿನಿ ಕ್ಲೈಂಬರ್. ಥೈವಾನ್‍ನ ಯುಶಾನ್ ನ್ಯಾಷನಲ್ ಪಾರ್ಕಿನ ಕಂದಕಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಿಗಿ ವೂ ಅಲ್ಲಿಯೇ ಮೃತಪಟ್ಟಿದ್ದಾಳೆ. ಆಕೆಯ ಮೃತ ದೇಹವನ್ನು ಥೈವಾನ್ ರಕ್ಷಣಾ ಅಧಿಕಾರಿಗಳು ಮಂಗಳವಾರ ಪತ್ತೆ ಹಚ್ಚಿದ್ದಾರೆ.
Advertisement
ಆಗಿದ್ದೇನು?:
ಗಿಗಿ ವೂ ಶನಿವಾರ ಯುಶಾನ್ ನ್ಯಾಷನಲ್ ಪಾರ್ಕ್ ನ ವೂ ಚಿ ಯುನಾ ಪರ್ವತ ಏರುತ್ತಿದ್ದಳು. ಈ ವೇಳೆ ಆಯ ತಪ್ಪಿದ ಪರಿಣಾಮ 20 ಮೀಟರ್ ಆಳದ ಕಂದಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ತನ್ನ ಫೋನ್ ನಿಂದ ಸ್ನೇಹಿತೆಗೆ ಕರೆ ಮಾಡಿ, ಪರ್ವತ ಏರುತ್ತಿರುವಾಗ ಜಾರಿ ಬಿದ್ದು, ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ನಡೆಯಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ರಕ್ಷಿಸು ಎಂದು ಕೇಳಿಕೊಂಡಿದ್ದಾಳೆ.
Advertisement
Advertisement
ಘಟನೆಯ ಕುರಿತು ಗಿಗಿ ವೂ ಸ್ನೇಹಿತೆ ಮಾಹಿತಿ ನೀಡಿದ್ದಳು. ಆದರೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಹೆಲಿಕಾಪ್ಟರ್ ಹಾರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಮಾಹಿತಿ ಸಿಕ್ಕ 28 ಗಂಟೆಯ ಬಳಿಕ (ಸೋಮವಾರ) ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಆದರೆ ಮಂಗಳವಾರ ಗಿಗಿ ವೂ ಮೃತ ದೇಹ ಪತ್ತೆಯಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪರ್ವತಾರೋಹಿಗಳ ಧರಿಸನ್ನು ಹಾಕಿಕೊಂಡು ಪರ್ವತ ಏರುತ್ತಿದ್ದ ಗಿಗಿ ವೂ, ಎತ್ತರ ಪ್ರದೇಶದ ಮೇಲೆ ಬಿಕಿನಿ ಉಡುಪಿನ ಮೇಲೆ ನಿಂತು ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಳು. ಬಳಿಕ ಅವುಗಳನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಳು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv