ಭೋಪಾಲ್: ಹನುಮಂತನ (Hanuman) ಚಿತ್ರದ ಎದುರೇ ಬಿಕಿನಿ (Bikini) ತೊಟ್ಟು ಮಹಿಳೆಯರ ದೇಹದಾಢ್ಯ ಸ್ಪರ್ಧೆ (Women Bodybuilding Competition) ನಡೆಸಲಾಗಿದ್ದು, ಬಳಿಕ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿವೆ.
ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿ ನಡೆದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ಚಿತ್ರದ ಎದುರು ಬಿಕಿನಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಘಟನೆ ಬಳಿಕ ಕಿಡಿ ಕಾರಿರುವ ಕಾಂಗ್ರೆಸ್ (Congress), ಈ ಕಾರ್ಯಕ್ರಮ ಹಿಂದೂ (Hindu) ಭಾವನೆಗಳಿಗೆ ನೋವುಂಟು ಮಾಡಿದೆ. ಇದು ದೇವರಿಗೆ ಮಾಡಿರುವ ಅವಮಾನ, ಈ ಕೂಡಲೇ ಕಾರ್ಯಕ್ರಮದ ಆಯೋಜಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
बीजेपी नेताओं ने किया हनुमान जी का अपमान :
रतलाम में भाजपा के बीजेपी विधायक चैतन्य कश्यप और महापौर प्रह्लाद पटेल ने हनुमान जी की मूर्ति स्टेज पर रखकर अश्लीश कार्यक्रम का आयोजन किया।
शिवराज जी,
भाजपा बार-बार हिन्दुओं का अपमान क्यों करती है❓ pic.twitter.com/C4FWb2i72N
— MP Congress (@INCMP) March 6, 2023
ಈ ನಡುವೆ ಸಮಾಜವಾದಿ ಪಕ್ಷವೂ ಕೂಡಾ ಈ ಕಾರ್ಯಕ್ರಮ ಹಿಂದೂ ದೇವರಿಗೆ ಅವಮಾನ ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ವರದಿಗಳ ಪ್ರಕಾರ ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್‌ನ ಮೇಯರ್ (ಬಿಜೆಪಿ) ಪ್ರಹ್ಲಾದ್ ಪಟೇಲ್ ಆಯೋಜಿಸಿದ್ದರು. ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದಾದ ಬಳಿಕ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ.
ಈ ಘಟನೆಯಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಿಡಿಯಾಗಿದ್ದು, ಕಾರ್ಯಕ್ರಮ ನಡೆದ ಸ್ಥಳವನ್ನು ಗಂಗಾಜಲ ಹಾಕಿ ಶುದ್ಧೀಕರಿಸಿದ್ದಾರೆ. ಹನುಮಾನ್ ಚಾಲೀಸ ಪಠಿಸಿದ್ದಾರೆ. ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು ಇದು ಹನುಮಂತ ದೇವರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಮಿಸ್ಸಿಂಗ್.. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ – ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಅಭಿಯಾನ
ಬಳಿಕ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆಕೆ ಮಿಶ್ರಾ, ಹನುಮಂತನ ಚಿತ್ರದ ಎದುರು ನಗ್ನತೆಯನ್ನು ಪ್ರದರ್ಶಿಸಲಾಗಿದ್ದು, ಬಿಜೆಪಿ ನಾಯಕರ ಸಮ್ಮುಖದಲ್ಲೂ ಪ್ರದರ್ಶನ ಮಾಡಲಾಗಿದೆ. ಬಿಜೆಪಿ ತನ್ನನ್ನು ರಾಮಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ. ಆದರೆ ಮತ್ತೊಂದೆಡೆ ಅದರ ನಾಯಕರೇ ಹನುಮಂತನನ್ನು ಅವಮಾನಿಸುತ್ತಿದ್ದಾರೆ. ಹಿಂದೂ ದೇವತೆಯನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
भाजपाई धार्मिक मूर्तियों का अपमान न करें। pic.twitter.com/65MlHVQkb0
— Akhilesh Yadav (@yadavakhilesh) March 6, 2023
ಅಸಭ್ಯತೆಯ ಆರೋಪದ ಬಗ್ಗೆ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಹಿತೇಶ್ ಬಾಜ್‌ಪೇಯ್, ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜು ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಾಂಗ್ರೆಸ್ಸಿಗರು ನೋಡಲು ಇಷ್ಟಪಡುವುದಿಲ್ಲ. ಏಕೆಂದರೆ ಅವರೊಳಗಿನ ದೆವ್ವ ಇದನ್ನು ನೋಡಿ ಎಚ್ಚರಗೊಳ್ಳುತ್ತದೆ. ಅವರು ಆಟದ ಮೈದಾನದಲ್ಲಿ ಮಾತ್ರವೇ ಮಹಿಳೆಯರನ್ನು ತಮ್ಮ ಕೊಳಕು ಕಣ್ಣುಗಳಿಂದ ನೋಡುತ್ತಾರೆ. ಅವರಿಗೆ ನಾಚಿಕೆ ಆಗಲ್ವಾ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸೊಳ್ಳೆ ಔಷಧಿ ಸಿಂಪಡಿಸಿದವರಿಗೆ ಬಿಲ್ ಬಾಕಿ ಆರೋಪ – ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು