ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸೇತುವೆಯಲ್ಲಿ ಗುಂಡಿಗೆ ಬಿದ್ದು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಾನ್ವಿ (Manvi) ತಾಲೂಕಿನ ದೋತರಬಂಡಿ (Dhotarabandi) ಹಳ್ಳದಲ್ಲಿ ನಡೆದಿದೆ.
ಬೈಕ್ ಸವಾರರಾದ ಬಸವಲಿಂಗ, ಶಾಂತಮ್ಮ, ಮೌನೇಶ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ
ಧಾರಾಕಾರ ಮಳೆಯಿಂದಾಗಿ ದೋತರಬಂಡಿ ಹಳ್ಳದ ಸೇತುವೆ ಮುಳುಗಡೆಯಾಗಿದ್ದು, ಉಟಕನೂರು, ಬೆಳವಟ, ದೊತರಬಂಡಿ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಸೇತುವೆ ಮಧ್ಯದಲ್ಲಿರುವ ಗುಂಡಿ ಕಾಣದೇ ಬಿದ್ದ ಬೈಕ್ ಸವಾರರು ಬಚಾವ್ ಆಗಿದ್ದಾರೆ.
ಹಳ್ಳದಲ್ಲಿ ಬಿದ್ದ ಬೈಕ್‌ಗಳನ್ನು ಗ್ರಾಮಸ್ಥರು ಜೆಸಿಬಿಯಿಂದ ಹೊರತೆಗೆದಿದ್ದಾರೆ. ಇನ್ನೂ ಸೇತುವೆ ಮುಳುಗಡೆಯಾಗಿದ್ದರೂ, ಜೀವ ಭಯದಲ್ಲಿಯೇ ಜನ ಹಳ್ಳ ದಾಟುತ್ತಿದ್ದಾರೆ. ಜೋರು ಮಳೆ ಬಂದಾಗಲೆಲ್ಲ ಇಲ್ಲಿನ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.ಇದನ್ನೂ ಓದಿ: ಅಬ್ದುಲ್ ರಹೀಂ ಹತ್ಯೆ| ಇಬ್ಬರು ಪರಿಚಯಸ್ಥರು ಸೇರಿ 15 ಮಂದಿ ವಿರುದ್ಧ ಎಫ್‌ಐಆರ್