ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸದ ಲಾರಿಗೆ (BBMP Garbage Truck) 10 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರಿನ (Bengaluru) ಥಣಿಸಂಧ್ರ ರೈಲ್ವೆ ಟ್ರ‍್ಯಾಕ್ ಬಳಿ ನಡೆದಿದೆ.
ಐಮಾನ್ (10) ಮೃತ ಬಾಲಕ. 12 ಸುಮಾರಿಗೆ ಸ್ಕೂಲ್ ಅಡ್ಮಿಷನ್ ವಿಚಾರಿಸಲು ಮನೆಯಿಂದ ಹೊರಟಿದ್ರು. ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಬಾಲಕ ತೆರಳಿದ್ದ. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಬಾಲಕನ ತಂದೆಗೂ ಗಾಯಗಳಾಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೃಶ್ಯಕಂಡು ರೊಚ್ಚಿಗೆದ್ದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹೆಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಬಿಬಿಎಂಪಿ (BBMP) ಕಸದ ಲಾರಿಗೆ ಥಣಿಸಂದ್ರದಲ್ಲಿ ಇದು 4ನೇ ಬಲಿಯಾಗಿದೆ. ಇದನ್ನೂ ಓದಿ: ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಯಲಹಂಕ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರದ್ದು ತಪ್ಪು? ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ | ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – 16 ನಕ್ಸಲರ ಹತ್ಯೆ
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಧಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದ ಘಟನೆ ನಡೆದಿತ್ತು. ಇದನ್ನೂ ಓದಿ: 2ನೇ ಗಂಡನೊಂದಿಗೆ ನಂಟು -3ನೇ ಗಂಡನಿಂದ ಪತ್ನಿ ಸೇರಿ ನಾಲ್ವರ ಬಾಳಿಗೆ ಕತ್ತಿಯೇಟು