Tuesday, 17th July 2018

ಕಾರ್ ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿದ ಬೈಕ್ ಸವಾರ- ಮುಂದೇನಾಯ್ತು? ವಿಡಿಯೋ ನೋಡಿ

ಬೀಜಿಂಗ್: ಬೈಕ್‍ಗೆ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಗಾಳಿಯಲ್ಲಿ ಹಾರಿದ್ರೂ ಪವಾಡಸದೃಶವಾಗಿ ಬದುಕುಳಿದಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಮೈ ಜುಮ್ಮೆನಿಸುವಂತಿದೆ.

ಸಿಗ್ನಲ್‍ನಲ್ಲಿ ಕೆಂಪು ಲೈಟ್ ಬಿದ್ದಾಗ ಇತರೆ ವಾಹನಗಳು ನಿಲ್ಲಿಸಿದ್ದರೂ ವ್ಯಕ್ತಿಯೊಬ್ಬ ತನ್ನ ಬೈಕ್ ನಿಲ್ಲಿಸದೆ ಎಡಕ್ಕೆ ತಿರುಗಿದ್ದಾನೆ. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಮುಂದೆ ಬಂದಿದ್ದು, ಕಾರೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ಎಲ್ಲಾ ದೃಶ್ಯ ಟ್ರಾಫಿಕ್ ಸಿಗ್ನಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರ್ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಕಾರಿನ ಮುಂಭಾಗದ ಗಾಜಿನ ಮೇಲೆ ಹಾರಿದ್ದಾನೆ. ನಂತರ ಆತ ಇದ್ದಕ್ಕಿದ್ದಂತೆ ಮಾಯವಾದಂತೆ ಅನ್ನಿಸುತ್ತೆ. ಆದ್ರೆ ನಂತರ ಕಾರ್ ಮುಂದೆ ಹೋಗಿ ನಿಂತಾಗ ವ್ಯಕ್ತಿ ಎದ್ದು ನಿಂತಿರುವುದು ಕಾಣುತ್ತದೆ. ಆತ ಶಾಕ್‍ನಿಂದ ಚಡಪಡಿಸೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಆತನಿಗೆ ಯಾವುದೇ ಗಾಯಗಳಾದಂತೆ ಕಾಣುವುದಿಲ್ಲ. ಕಾರ್ ಚಾಲಕಿ ಇಳಿದು ಬಂದು ಆತನಿಗೆ ಏನಾಯಿತು ಎಂದು ನೋಡಿದ್ದಾರೆ.

ವಿಡಿಯೋ ನೋಡಿದವರು ಆ ವ್ಯಕ್ತಿಗೆ ಒಂದಿಷ್ಟೂ ಪೆಟ್ಟಾಗದಿರುವುದನ್ನ ಕಂಡು ಆಶ್ಚರ್ಯಚಕಿತರಾಗಿದ್ದಾರೆ.

 

Leave a Reply

Your email address will not be published. Required fields are marked *