ಬೆಂಗಳೂರಿನಲ್ಲಿ ಚಾಲಕನನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

Public TV
2 Min Read
BENGALURU HIT AND RUN CASE

ಬೆಂಗಳೂರು: ಇತ್ತೀಚೆಗೆ ದೆಹಲಿಯಲ್ಲಿ (NewDelhi) ನಡೆದ ಭಯಾನಕ ಹಿಟ್ ಅಂಡ್ ರನ್ ಕೇಸ್ ಮರೆಯುವ ಮುನ್ನವೇ ಬೆಂಗಳೂರಿನಲ್ಲೂ (Bengaluru) ಇದೇ ರೀತಿ ಭಯಾನಕ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯ ಆಗದಿದ್ದರೂ ವೃದ್ಧರೊಬ್ಬರನ್ನು ಯುವಕನೊಬ್ಬ ಬೈಕಿನ ಹಿಂಭಾಗದಲ್ಲಿ ಧರಧರನೆ ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಗಾರ್ಡನ್ ಸಿಟಿ ಬೈಕ್ ಸವಾರನ ಹಿಟ್ ಅಂಡ್ ರನ್ ಕೇಸ್ ಭಯಾನಕ ವೀಡಿಯೋವನ್ನು ವಾಹನ ಸವಾರರು ಸೆರೆ ಹಿಡಿದಿದ್ದಾರೆ. ಮಾಗಡಿ ರೋಡ್ ಟೋಲ್ ಗೇಟ್ ಬಳಿ ಬೊಲೆರೋಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಟೋಲ್ ಗೇಟ್ ಬಳಿ ಬೊಲೆರೊ ವೆಹಿಕಲ್‌ಗೆ ಬೈಕ್ ಸವಾರನೊಬ್ಬ ರಾಂಗ್ ರೂಟ್‍ನಲ್ಲಿ ಬಂದು ಡಿಕ್ಕಿ ಹೊಡೆದಿದ್ದ. ಈ ಬಗ್ಗೆ ಬೊಲೆರೊ ವೆಹಿಕಲ್‌ ಡ್ರೈವರ್ (Driver) ಪ್ರಶ್ನಿಸುತ್ತಿದ್ದಂತೆ ಬೈಕ್ (Bike) ಹತ್ತಿ ಸವಾರ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಆದರೆ ಬೈಕ್ ಸವಾರನನ್ನು ಹಿಡಿಯಲು ಬೊಲೆರೊ ವೆಹಿಕಲ್‌ ಚಾಲಕ ಮುಂದಾಗಿದ್ದು, ಚಾಲಕ ಬೈಕ್‍ನ್ನು ಹಿಡಿದುಕೊಂಡಿದ್ದಾನೆ.

BENGALURU HIT AND RUN CASE 1

ಆದರೂ ಬೈಕ್ ಸವಾರ ಬೊಲೆರೊ ವೆಹಿಕಲ್‌ ಚಾಲಕನನ್ನು ಎಳೆದೊಯ್ದಿದ್ದಾನೆ. ಹೀಗೆ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೇ ಬೈಕ್ ಸವಾರ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನು ಬೈಕ್‍ನಲ್ಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಸಾರ್ವಜನಿಕರು ಬೈಕ್ ಸವಾರನನ್ನು ಬೆನ್ನಟ್ಟಿದ್ದಾರೆ.

BENGALURU HIT AND RUN CASE 2

ಕೊನೆಗೂ ಬೈಕ್ ಸವಾರನನ್ನು ತಡೆಯುವಲ್ಲಿ ಯಶಸ್ವಿಯಾದ ಸಾರ್ವಜನಿಕರು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ನಂತರ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ವಿಜಯ ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೈಕ್‍ನ ಹಿಂದೆ ನೇತುಬಿದ್ದು ಒಂದು ಕಿ.ಮೀವರೆಗೆ ಎಳೆದೊಯ್ಯಲ್ಪಟ್ಟ ಬೊಲೆರೊ ವೆಹಿಕಲ್‌ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

ಸಾರ್ವಜನಿಕರಿಂದ ಧರ್ಮದೇಟು ತಿಂದ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರನ್ನು ಪೊಲೀಸರು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿ ಗೋವಿಂದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರೈಲ್ವೆಯಲ್ಲಿ ಕೆಲಸ ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article