ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಖತರ್ನಾಕ್ ಟೀಮ್ ಒಂದು ಬೆಂಗಳೂರು ಹೊರವಲಯದಲ್ಲಿ ಪುಲ್ ಆಕ್ಟೀವ್ ಆಗಿದೆ. ಒಂದೇ ಕೈಯಲ್ಲಿ ಭಯಾನಕ ವೀಲಿಂಗ್ ಮಾಡುವುದಲ್ಲದೇ ನಂಬರ್ ಪ್ಲೇಟ್ ಇಲ್ಲದೆ ಬೈಕ್ ರೈಡ್ ಮಾಡುವ ಈ ಪುಂಡರ ಗ್ಯಾಂಗ್ ಜನರಲ್ಲಿ ಆತಂಕ ಮೂಡಿಸಿದೆ.
ನಂಬರ್ ಪ್ಲೇಟ್ ಇದ್ರೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ ಎಂದು ನಂಬರ್ ಪ್ಲೇಟ್ ತೆಗೆದಿಟ್ಟು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭಯಾನಕವಾಗಿ ರಾತ್ರಿ ವೇಳೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಾರೆ. ಇದನ್ನೂ ಓದಿ: ಖಾಸಗಿ ಬಸ್, ಕಂಟೈನರ್ ಮುಖಾಮುಖಿ- 6ಕ್ಕೂ ಹೆಚ್ಚು ಮಂದಿ ಸಜೀವ ದಹನ
ನೆಲಮಂಗಲ ತಾಲೂಕಿನ ರಾಷ್ಟ್ರೀಯ ರಸ್ತೆಯಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿಗೆ ಅಕ್ಕಪಕ್ಕದ ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಪುಂಡರು ಪೊಲೀಸರ ಭಯವಿಲ್ಲದೆ ಹೆದ್ದಾರಿಯಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡುವುದಲ್ಲದೇ ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ
ಇದೀಗ ಪುಂಡರ ಖತರ್ನಾಕ್ ಕೆಲಸಕ್ಕೆ ಬ್ರೇಕ್ ಹಾಕಬೇಕಾಗಿ ಜನರು ಆಗ್ರಹಿಸಿದ್ದಾರೆ.