ಚಿಕ್ಕಮಗಳೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದ 5 ಬೈಕ್‍ಗಳನ್ನು ಸಖರಾಯಪಟ್ಟಣ ಪೊಲೀಸರು ಸೀಜ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ 5 ಬೈಕ್‍ಗಳಲ್ಲಿ 10 ಯುವಕರು ನಡುರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಆ ಬೈಕ್‍ಗಳು ಚಿಕ್ಕಮಗಳೂರು ನಗರ ದಾಟಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಗೆ ಹೋಗುವಷ್ಟರಲ್ಲಿ ಸಖರಾಯಪಟ್ಟಣ ಪೊಲೀಸರು ಬೈಕ್‍ಗಳನ್ನು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಪಂ ರಸ್ತೆಯಲ್ಲಿ ಯುವಕರು ರೇಸ್‍ನಲ್ಲಿ ವ್ಹೀಲಿಂಗ್ ಮಾಡಿದ್ದರು. ಬೈಕ್‍ಗಳನ್ನು ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗಿದ್ದಾರೆ.
Advertisement
Advertisement
ಯುವಕರ ಈ ಬೈಕ್ ವ್ಹೀಲಿಂಗ್ ದೃಶ್ಯವನ್ನು ಸ್ಥಳೀಯ ವಾಹನ ಸವಾರರು ರೆಕಾರ್ಡ್ ಮಾಡಿದ್ದರು. ಮಧ್ಯಾಹ್ನ ರಸ್ತೆ ಮಧ್ಯೆಯೇ ಈ ರೀತಿ ಬೈಕ್ ವ್ಹೀಲಿಂಗ್ ಮಾಡುವುದನ್ನು ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಹೆದ್ದಾರಿಯಲ್ಲಿ ಗಜಪಡೆ ಹಾವಳಿ – ಕಾರಿನ ಮೇಲೆ ದಾಳಿ, ಚಾಲಕ ಜಸ್ಟ್ ಮಿಸ್
Advertisement
Advertisement
ಯುವಕರು ಇಂತಹ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿ ಹೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು. ಬೇರೆಯವರಿಗೆ ತೊಂದರೆಯಾಗುವುದರ ಜೊತೆ ವ್ಹೀಲಿಂಗ್ ಮಾಡುವಾಗ ಬೈಕಿನಲ್ಲಿ ಬಿದ್ದರೆ ಅವರಿಗೂ ಕೈಕಾಲು ಮುರಿದು ಹೋದರೆ ಹೇಗೆ ಎಂದು ಜನರೇ ಆತಂಕಕ್ಕೀಡಾಗಿದ್ದರು. ಆದರೆ ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಗಾಡಿಗಳನ್ನು ಸೀಜ್ ಮಾಡಿದ್ದರಿಂದ ಸ್ಥಳೀಯರು ಪೊಲೀಸ್ ಇಲಾಖೆ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ