ನೆಲಮಂಗಲ: ತಮ್ಮ ಪ್ರಾಣದ ಜೊತೆಗೆ ಇತರೆ ಬೈಕ್ (Bike) ಸವಾರರ ಜೀವದ ಜೊತೆಗೂ ಚೆಲ್ಲಾಟ ಆಡ್ತಿರೋ ಯುವಕರ ಪುಂಡಾಟದ ದೃಶ್ಯ ಎದೆ ಝಲ್ಲೆನ್ನಿಸುವಂತಿದೆ.
Advertisement
ಹೌದು. ಬೆಂಗಳೂರು (Bengaluru) ಹೊರವಲಯ ನೆಲಮಂಗಲ ತಾಲೂಕಿನ ಬೂದಿಹಾಳ್ ನಿಂದ ಡಾಬಸ್ ಪೇಟೆಯವರೆಗಿನ ಎನ್.ಎಚ್-48 ಹೆದ್ದಾರಿಯಲ್ಲಿ (NH-48) ಕೆಲ ಯುವಕರು ಪುಂಡಾಟ ಮೆರೆದಿದ್ದಾರೆ. ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರದ ನಡುವೆಯೂ ಕೆಲ ಪುಂಡರು ಬೈಕ್ ವ್ಹೀಲಿಂಗ್ (Bike Wheeling) ಮಾಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಅಖಾಡಕ್ಕಿಳಿದ ಸಿದ್ದರಾಮಯ್ಯಗೆ ನೂರೆಂಟು ವಿಘ್ನ- ಸಿದ್ದು ಸೋಲಿಸೋದಾಗಿ HDK ಶಪಥ
Advertisement
Advertisement
ಪೊಲೀಸರಿಗೂ (Police) ಕ್ಯಾರೆ ಎನ್ನದೇ ಮರ‍್ನಾಲ್ಕು ಬೈಕ್ ಸವಾರರು ರಾಜರೋಷವಾಗಿ ವ್ಹೀಲಿಂಗ್ ಮಾಡಿದ್ದಾರೆ. ಇನ್ನೂ ಇಂತಹ ಅಪಾಯಕಾರಿಯಿಂದ ವೇಗದ ಚಾಲನೆ ಕೂಡ ಮೃತ್ಯುಕೂಪದ ದಾರಿಗೆ ಕಾರಣವಾಗಿದೆ. ಅಲ್ಲದೇ ಅಪಘಾತವಾದ್ರೆ ಸಾವು ನೋವಾಗುವ ಸಂದರ್ಭ ಕೂಡ ಜಾಸ್ತಿಯಾಗಿರುತ್ತದೆ. ಇಂತಹ ಅಪಾಯಕಾರಿ ಡೆಡ್ಲಿ ಬೈಕ್ ವ್ಹೀಲಿಂಗ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೂ ಆತಂಕ ಉಂಟಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಣ ಸಂಸ್ಥೆಗಳ ಎಡವಟ್ಟು- ಫಲಿತಾಂಶ ಪ್ರಕಟ ವಿಳಂಬ, ವಿದ್ಯಾರ್ಥಿಗಳಿಗೆ ಆತಂಕ
Advertisement
ಆದ್ದರಿಂದ ನಿತ್ಯ ನೂರೆಂಟು ಕೆಲಸದಲ್ಲಿರುವ ಪೊಲೀಸರ ಮೇಲೆ ಒತ್ತಡ ತರೋದಕ್ಕಿಂತ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸುವಂತೆ ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k