ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಪೊಲೀಸ್ ತಂಡವೊಂದು ರಚನೆಯಾಗಿದೆ. ಈ ಪೊಲೀಸ್ ತಂಡ ವ್ಹೀಲಿಂಗ್ ಮಾಡಿ ಅದನ್ನು ಫೇಸ್ಬುಕ್ ಗೆ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಈಗಾಗಲೇ ಆರ್ ಟಿ ನಗರ ಸಂಚಾರಿ ಪೊಲೀಸರಿಂದ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಬಾಲಕ ಆರ್ ಟಿ ನಗರದ ಮುಖ್ಯ ರಸ್ತೆಯ ಕಬಾಬ್ ಮ್ಯಾನರ್ ಹೊಟೆಲ್ ಬಳಿ ವ್ಹೀಲಿಂಗ್ ಮಾಡುತ್ತಿದ್ದನು. ನಂತರ ವ್ಹೀಲಿಂಗ್ ಮಾಡಿದ್ದ ತನ್ನ ಫೋಟೋವನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು ಫೇಸ್ಬುಕ್ ಪೋಸ್ಟ್ ನೋಡಿ ಬಾಲಕನ ಮನೆಗೆ ಬಂದು ಪೋಷಕರಿಗೆ ನೋಟೀಸ್ ಕೊಟ್ಟಿದ್ದಾರೆ.
Advertisement
ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಡಿಯೋ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement