ದಾವಣಗೆರೆ: ವಾಹನ ತಪಾಸಣೆ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಟ್ರಾಫಿಕ್ ಪೇದೆ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ವಿದ್ಯಾನಗರದ ಬಿಐಟಿ ರಸ್ತೆಯಲ್ಲಿ ನಡೆದಿದೆ. ಬಿಐಟಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಈ ವೇಳೆ ಕೋಪಗೊಂಡ ಪೋಲೀಸ್ ಪೇದೆ ಬೈಕ್ ಸವಾರನಿಗೆ ಕಾಲಿನಿಂದ ಒದ್ದಿದ್ದಾರೆ.
ಟ್ರಾಫಿಕ್ ಪೊಲೀಸರು ಹಾಗೂ ಬೈಕ್ ಸವಾರರ ನಡುವೆ ನಡುರಸ್ತೆಯಲ್ಲೇ ಮಾತಿನ ಚಕಮಕಿ ನಡೆದಿರುವ ದೃಶ್ಯ, ಕೋಪಗೊಂಡ ಪೇದೆ ಬೈಕ್ ಸವಾರನಿಗೆ ಕಾಲಿನಿಂದ ಒದೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.