ಲಕ್ನೋ: ಕೊಲೆಯತ್ನ, ದರೋಡೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಎನ್‍ಕೌಂಟರ್ (Encounter) ಭಯದಿಂದ ನನ್ನನ್ನು ಕ್ಷಮಿಸಿ ಯೋಗಿಜಿ ಎಂಬ ಫಲಕದೊಂದಿಗೆ (Placard) ಮನ್ಸೂರ್‌ಪುರ (Mansoorpur) ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಉತ್ತರಪ್ರದೇಶದ (Uttar Pradesh) ಬೈಕ್‍ಗಳ್ಳರ ಗುಂಪಿನಲ್ಲಿದ್ದ ಅಂಕುರ್ ಎಂಬಾತ ಕುಟುಂಬದವರೊಂದಿಗೆ ಪೊಲೀಸ್ ಠಾಣೆಗೆ ಬಂದು ಇನ್ನೆಂದೂ ಕಳ್ಳತನ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾನೆ ಎಂದು ಪೊಲೀಸ್ ಠಾಣಾಧಿಕಾರಿ ರಜತ್ ತ್ಯಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ
Advertisement
ಮಂಗಳವಾರ ಕಳ್ಳರ ಗ್ಯಾಂಗ್‍ನ ಇಬ್ಬರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬ ಪರಾರಿಯಾಗಿದ್ದಾನೆ. ಬಂಧಿತರಿಂದ ಮೂರು ಬೈಕ್ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಎಸ್ಪಿ ರವಿಶಂಕರ್ ಮಿಶ್ರ ತಿಳಿಸಿದ್ದಾರೆ. ಶರಣಾಗುವ ಹಿಂದಿನ ದಿನ ಅರೋಪಿಗಳ ತಂಡದ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು.
Advertisement
Advertisement
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೇಲೆ 9 ಸಾವಿರ ಎನ್‍ಕೌಂಟರ್‍ಗಳು ನಡೆದಿವೆ. ಅದರಲ್ಲಿ ಅಪರಾಧ ಕೃತ್ಯದ ಹಿನ್ನೆಲೆಯ 160 ಶಂಕಿತರ ಹತ್ಯೆಯಾಗಿದೆ. ಇದನ್ನೂ ಓದಿ: ಸಚಿವ ಹಾಲಪ್ಪ ಆಚಾರ್ ಸೀರೆ ಹಂಚಿಕೆ – ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್