ಬೆಂಗಳೂರು: ಲಾಕ್ ಬ್ರೇಕ್‍ನಲ್ಲಿ ನೈಪುಣ್ಯತೆ ಹೊಂದಿ 19 ಬೈಕ್ ಕಳ್ಳತನ ಮಾಡಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ಸುಶಿಕ್ಷಿತ ಕಳ್ಳನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಸಿರ್ಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಕುಮಾರ್(20) ಬಂಧಿತ ಆರೋಪಿ. ಈತ ನಗರಗಳಲ್ಲಿ ಬೈಕ್‍ಗಳನ್ನು ಕದ್ದು, ಯಾರಿಗೂ ಅನುಮಾನ ಬಾರದಂತೆ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ.
Advertisement
ಎರಡು ಬುಲೆಟ್, ಆರು ಡಿಯೋ, ನಾಲ್ಕು ಆರ್ ಎಕ್ಸ್ ವಾಹನ, ನಾಲ್ಕು ಪಲ್ಸರ್ ಸೇರಿದಂತೆ ಒಟ್ಟು 20 ಬೈಕ್‍ಗಳನ್ನು ಕದ್ದು ಮಾರಾಟ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಈತನನ್ನು ವಿಚಾರಣೆ ಮಾಡಿದಾಗ ಸೂಲಿಬೆಲೆ, ಹಾಸನ, ಹಿರಿಸಾವೆ ಹಳ್ಳಿಗಳಲ್ಲಿ ಬೈಕ್‍ಗಳನ್ನು ಮಾರಾಟ ಮಾಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ
Advertisement
Advertisement
ದುಶ್ಚಟಗಳಿಗೆ ಬಿದ್ದು ಕಳ್ಳತನ ಹವ್ಯಾಸ ಮಾಡಿಕೊಂಡಿದ್ದ ಈತ ಹೊಸಕೋಟೆ ನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನಂಬರ್ ಪ್ಲೇಟ್ ಇಲ್ಲದ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಹೆಸರನ್ನು ಹೇಳಲು ತಡಪಡಿಸುತ್ತಿದ್ದಾಗ ಪೊಲೀಸರು ಅನುಮಾನಗೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
Advertisement
ವಿಚಾರಣೆ ವೇಳೆ ಆರೋಪಿ ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಹುಳಿಮಾವು, ಹೆಬ್ಬಾಳ, ಉಪ್ಪಾರಪೇಟೆ, ಶೇಷಾದ್ರಿಪುರಂ, ಬನಶಂಕರಿ, ಹೈಗ್ರೌಂಡ್, ಅಶೋಕ ನಗರ, ಪರಪ್ಪನ ಅಗ್ರಹಾರ, ನೆಲಮಂಗಲ ಟೌನ್, ಮಲ್ಲೇಶ್ವರಂ, ಮಾದನಾಯಕನಹಳ್ಳಿ, ಕೊಡಿಗೆಹಳ್ಳಿ, ಅಶೋಕನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ನಗರ ಠಾಣಾ ಸರಹದ್ದಿನಲ್ಲಿ ಒಟ್ಟು 15 ಲಕ್ಷ ಮೌಲ್ಯದ 19 ಬೈಕುಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿಯಿಂದ 19 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‍ಪಿ ಉಮಾಶಂಕರ್ ತಿಳಿಸಿದ್ದಾರೆ.