ಹಾವೇರಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್‌ವೊಂದನ್ನು ನಕಲಿ ಕೀ ಬಳಿಸಿ ಕಳ್ಳತನ (Bike Theft) ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Rane Bennur) ನಗರದಲ್ಲಿ ನಡೆದಿದೆ.
ನಗರದ ಬ್ಯಾಂಕ್‌ವೊಂದರ (Bank) ಮುಂದೆ ಬೈಕ್ ನಿಲ್ಲಿಸಿ ಗ್ರಾಹಕ ಬ್ಯಾಂಕ್‌ನಲ್ಲಿ ತನ್ನ ಕೆಲಸ ಮುಗಿಸಿಬರಲು ಹೋಗಿದ್ದ. ವಾಪಸ್ ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಬೈಕ್ ಇಲ್ಲದ್ದನ್ನ ಕಂಡು ಬೈಕ್ ಸವಾರ ಕಂಗಾಲಾಗಿದ್ದಾನೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..
ನಕಲಿ ಕೀ ಬಳಿಸಿ, ಬೈಕ್ ಹ್ಯಾಂಡಲ್ ಲಾಕ್ ತೆಗೆದು ಬೈಕ್ ಕಳ್ಳತನ ಮಾಡಿಕೊಂಡು ಕ್ಷಣಾರ್ಧದಲ್ಲಿ ಖದೀಮ ಎಸ್ಕೇಪ್ ಆಗಿದ್ದಾನೆ. ಬೈಕ್ ಕಳ್ಳತನ ಮಾಡಿದ ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಹಕನ ಚಲನವಲನ ಕಂಡು ಬೈಕ್ ಕಳ್ಳತನ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ