ಮೈಸೂರು: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಕಳ್ಳನೊಬ್ಬ ಮೈಸೂರಿನ ಗನ್ ಹೌಸ್ ಬಳಿ ಸಿಕ್ಕಿ ಬಿದ್ದಿದ್ದಾನೆ.
ಬನ್ನಿಮಂಟಪದ ಎರಡನೇ ಹಂತದ ನಿವಾಸಿ ಶಾಹೀದ್(19) ಸಿಕ್ಕಿ ಬಿದ್ದ ಕಳ್ಳ. ಈತ ನಂಬರ್ ಪ್ಲೇಟ್ ಇಲ್ಲದ ಡ್ಯೂಕ್ ಬೈಕ್ ಓಡಿಸಿಕೊಂಡು ನಗರದ ಗನ್ ಹೌಸ್ ಬಳಿ ಬರುತ್ತಿದ್ದಾಗ ತಪಾಸಣೆಗಾಗಿ ಕೆ.ಆರ್. ಠಾಣೆಯ ಪೊಲೀಸರು ತಡೆದಿದ್ದಾರೆ. ಈ ವೇಳೆ ಆತ ಸಮರ್ಪಕ ದಾಖಲಾತಿಗಳನ್ನು ತೋರಿಸದೇ ಇದ್ದುದರಿಂದ ಅನುಮಾನಗೊಂಡ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ಬಳಿಕ ವಿಚಾರಣೆ ನಡೆಸಿದಾಗ ಡ್ಯೂಕ್ ಮತ್ತು ಆರ್ ಎಕ್ಸ್ 135 ಎಂಬ ಎರಡು ಐಷಾರಾಮಿ ಬೈಕ್ ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಆತ ಕದ್ದಿದ್ದ ಎರಡು ಬೈಕ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv