-55ಕ್ಕೂ ಹೆಚ್ಚು ಬೈಕ್ ವಶ
ಬೆಂಗಳೂರು: ಮೆಟ್ರೊ ಪಾರ್ಕಿಂಗ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಬೈಕ್‍ಗಳನ್ನು ಎಗರಿಸುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖದೀಮರು ಶೋಕಿ ಮಾಡುವುದಕ್ಕೆ ಎಂದು ದುಬಾರಿ ಬೆಲೆಯ ಬೈಕ್‍ಗಳನ್ನೆ ಟಾರ್ಗೆಟ್ ಮಾಡಿ ಕದಿಯುತ್ತಿದ್ದರು. ಹಾಡಹಗಲೇ ಬೈಕ್‍ಗಳನ್ನ ಕಳ್ಳತನ ಮಾಡಿ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್‍ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ದಿನೇಶ್ ಹಾವು, ಪ್ರವೀಣ್ ಕುಮಾರ್, ಪೈಜ್ ಶರೀಪ್, ಮಹೇಶ್‍ಮಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ಲದೇ ಬಂಧಿತರಿಂದ ಬರೋಬ್ಬರಿ 55ಕ್ಕೂ ಹೆಚ್ಚು ಬೈಕ್‍ಗಳನ್ನ ವಶಪಡಿಸಿಕೊಂಡಿದ್ದಾರೆ.
ಬಂಧಿತ ದಿನೇಶ್ ಹಾವು ಮೆಟ್ರೊ ಪಾರ್ಕಿಂಗ್ ಸ್ಥಳದ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದನು. ನಂತರ ಪಾರ್ಕಿಂಗ್ ಬರುವ ದುಬಾರಿ ಬೈಕ್‍ಗಳನ್ನ ಟಾರ್ಗೆಟ್ ಮಾಡಿ ಎಗರಿಸುತ್ತಿದ್ದರು. ಬೈಕ್ ಸಂಬಂಧಪಟ್ಟವರಿಗೆ ಅನುಮಾನ ಬಾರದ ರೀತಿಯಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹೋಗಿ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಹೇಳಿದ್ದಾರೆ.
ಬಂಧಿತ ಗ್ಯಾಂಗ್ ಇದೇ ರೀತಿ ಪಶ್ಚಿಮ ವಿಭಾಗದ ಕೆ.ಪಿ ಅಗ್ರಹಾರ, ಮಾಗಡಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಅತ್ತಿಗುಪ್ಪೆ, ವಿಜಯನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ಹಣದಲ್ಲಿ ಪಬ್, ಸಿನಿಮಾ, ಡಿಸ್ಕೋಥೆಕ್ ಅಂತ ಮೋಜು ಮಸ್ತಿ ಮಾಡುತ್ತಿದ್ದರು.