ಬೆಂಗಳೂರು: ರಾಯಲ್ ಎನ್ ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕದಿಯುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ತೂರು ಪೊಲೀಸರು ಮೂವರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಮತ್ ಖಾನ್ ಅಲಿಯಾಸ್ ಬುಲೆಟ್ ಖಾನ್, ಸಂತೋಷ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರಿಂದ ಪೊಲೀಸರು ಸುಮಾರು 30 ಲಕ್ಷ ಮೌಲ್ಯದ ದುಬಾರಿ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಮತ್ ಖಾನ್ ಅಲಿಯಾಸ್ ಬುಲೆಟ್ ಖಾನ್, ಸಂತೋಷ್ ಮತ್ತು ಮಂಜುನಾಥ್ ಮೂವರು ಆಧುನಿಕ ಮಾದರಿಯ ಹೆಚ್ಚು ಬೆಲೆ ಬಾಳುವ ಬೈಕ್ ಗಳನ್ನು ಮಾತ್ರ ಕದಿಯುತ್ತಿದ್ದರು. ಮನೆಯ ಹೊರಗೆ ಬೈಕ್ ಗಳನ್ನು ಪಾರ್ಕ್ ಮಾಡಿದ್ದ ಬಳಿಕ ಕ್ಷಣಾರ್ಧದಲ್ಲಿ ಕದಿಯುತ್ತಿದ್ದರು. ಇಂದು ಮಾಹಿತಿ ಮೇರೆಗೆ ವರ್ತೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಆರೋಪಿಗಳಿಂದ 10 ರಾಯಲ್ ಎನ್ ಫೀಲ್ಡ್ ಹಾಗೂ ಎರಡು ಕೆಟಿಎಂ ಡ್ಯೂಕ್ ಬೈಕ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಐದು ಪೊಲೀಸ್ ಠಾಣೆಗಳಲ್ಲಿ ಇವರು ವಿರುದ್ಧ ದಾಖಲಾಗಿದ್ದ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv