Connect with us

Dharwad

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೈಕ್ ಗಳನ್ನು ಕಳ್ಳರು ಕದಿಯುವ ವಿಡಿಯೋ ನೋಡಿ

Published

on

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮತ್ತೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಕೇವಲ ಒಂದು ವಾರದಲ್ಲಿ 15 ರಿಂದ 20 ಬೈಕಗಳನ್ನು ಕಳ್ಳರು ಕದಿದ್ದಾರೆ. ಇಂತಹದೊಂದು ಘಟನೆ ಮತ್ತೆ ಜಿಲ್ಲೆಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಕಿಮ್ಸ್ ನಲ್ಲೂ ಕೈಚಳಕ ತೋರಿಸಿದ ಕಳ್ಳರು ಎರಡು ದಿನಗಳಲ್ಲಿ 6 ಬೈಕ್ ಗಳನ್ನು ಕಳ್ಳತನ ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಆ.31ರಂದು ರಾತ್ರಿ ಮೂರು ಜನ ಕಳ್ಳರು ಬಂದು ಯಾರಿಗೂ ಅಂಜದೇ ಸರಳವಾಗಿ ಬೈಕನ್ನು ಕದ್ದಕೊಂಡು ಪರಾರಿಯಾಗಿದ್ದಾರೆ.

ಹೀಗಾಗಿ ಕಿಮ್ಸ್‍ನಲ್ಲಿ ಬೈಕ್ ಕದಿಯುತ್ತಿದ್ದ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕಳ್ಳರು ಸಿಬ್ಬಂದಿ ಹಾಗೂ ಪೊಲೀಸರ ಬೈಕುಗಳಿಗೂ ಸಹ ತಮ್ಮ ಕೈಚಳಕ ತೋರಿಸಿ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/NrjsaLcNl2U

Click to comment

Leave a Reply

Your email address will not be published. Required fields are marked *

www.publictv.in