ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸ್ಥಗಿತಗೊಂಡ ಬೆನ್ನಲ್ಲೇ ಆರ್‌ಟಿಓ (RTO) ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಸೀಜ್ ಮಾಡಿದೆ.
ಹೌದು, ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜೂ.16ರಿಂದ ಅನಧಿಕೃತ ಬೈಕ್ ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಆದೇಶದ ಬೆನ್ನಲ್ಲೇ ಆರ್‌ಟಿಓ ಅಧಿಕಾರಿಗಳು ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 11 ಆರ್‌ಟಿಓ ವ್ಯಾಪ್ತಿಯಲ್ಲಿ ಚಲಾಯಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಲಾಗಿದೆ. ಇಂದು ಸಹ ಹಲವು ತಂಡಗಳನ್ನ ರಚಿಸಿ ಆರ್‌ಟಿಒ ಕಾರ್ಯಚರಣೆಗಿಳಿದಿದೆ.ಇದನ್ನೂ ಓದಿ: ಹೊಸ ಐಟಿ ನೀತಿ ಮಾರ್ಗದರ್ಶನಕ್ಕಾಗಿ ಸರ್ಕಾರದಿಂದ ಎಐ ಕೌಶಲ್ಯ ಕುರಿತು ಅಧ್ಯಯನ: ಪ್ರಿಯಾಂಕ್ ಖರ್ಗೆ
ಕಚೇರಿ                   ಬೈಕ್ ಟ್ಯಾಕ್ಸಿಗಳ ಸಂಖ್ಯೆ
1.ಆರ್‌ಟಿಓ ಸೆಂಟ್ರಲ್ –         8
2.ಆರ್‌ಟಿಓ ವೆಸ್ಟ್ –            16
3.ಆರ್‌ಟಿಓ ಈಸ್ಟ್ –            12
4.ಆರ್‌ಟಿಓ ನಾರ್ತ್ –         10
5.ಆರ್‌ಟಿಓ ಸೌತ್ –           10
6.ಜ್ಞಾನಭಾರತಿ –               5
7.ದೇವನಹಳ್ಳಿ –                5
8.ಯಲಹಂಕ. –                4
9.ಲೆಕ್ಟ್ರಾನಿಕ್ ಸಿಟಿ –          15
10.ಕೆ.ಆರ್.ಪುರಂ –          13
11.ಚಂದಾಪುರ –               5
ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣದಿಂದಾಗಿ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಿತ್ತು.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ
 


 
		 
		 
		 
		 
		
 
		 
		 
		 
		