ಹುಬ್ಬಳ್ಳಿ: ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುವ ಪೊಲೀಸ್ ಸಿಬ್ಬಂದಿ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡ ಬೈಕ್ ಸವಾರನೊಬ್ಬ ಪೊಲೀಸರನ್ನೇ ತರಾಟೆಗೆ ತಗೆದುಕೊಂಡಿದ್ದಾನೆ.
ಪೊಲೀಸ್ ಸಿಬ್ಬಂದಿ ಟೋಯಿಂಗ್ ಮೂಲಕ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಬೈಕ್ ಸವಾರ ಟೋಯಿಂಗ್ ವಾಹನವನ್ನು ಹಿಂಬಾಲಿಸಿದ್ದಾನೆ.
ಟೋಯಿಂಗ್ ವಾಹನವನ್ನು ಹಿಂಬಾಲಿಸಿ ಚಾಲಕ, “ಸರ್, ನೀವು ಸೀಟ್ ಬೆಲ್ಟ್ ಹಾಕಿಲ್ಲ. ನಿಮ್ಮ ಚಾಲಕ ಕೂಡ ಸೀಟ್ ಬೆಲ್ಟ್ ಧರಿಸಿಲ್ಲ. ನಮಗೊಂದು ನ್ಯಾಯ, ನಿಮಗೊಂದು ನ್ಯಾಯನಾ. ಸರ್ ನಿಮ್ಮ ಹೆಸರು ಏನು ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ.
ಯುವಕ ಪ್ರಶ್ನೆ ಮಾಡುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ತಬ್ಬಿಬ್ಬಾಗಿ ಇದು ಗೂಡ್ಸ್ ವಾಹನ. ಇದಕ್ಕೆ ಸೀಟ್ ಬೆಲ್ಟ್ ಇರುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಪೊಲೀಸ್ ಹಾಗೂ ಬೈಕ್ ಸವಾರರನ ನಡುವೆ ನಡೆದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.