ವಿಡಿಯೋ: ಬೈಕ್‍ಗೆ ಗೂಡ್ಸ್ ಅಟೋ ಡಿಕ್ಕಿ- ಎದುರಿನಿಂದ ಬಂದ ಕ್ಯಾಂಟರ್ ಕೆಳಗೆ ಸಿಲುಕಿದ್ರೂ ಪಾರಾದ ಸವಾರ

Public TV
1 Min Read
CNG POST MAN AVANTHARA 7 1

ಮಡಿಕೇರಿ: ಬೈಕ್ ಮತ್ತು ಗೂಡ್ಸ್ ಅಟೋ ನಡುವಿನ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.

MDK ACCIDENT 2

ಎರಡು ದಿನಗಳ ಹಿಂದೆ ಮಡಿಕೇರಿ ಮಾರ್ಗವಾಗಿ ಬೈಕ್ ಸವಾರ ಸಿದ್ದಾಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಗೂಡ್ಸ್ ಆಟೋ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಎದುರಿನಿಂದ ಬಂದ ಕ್ಯಾಂಟರ್ ಅಡಿ ಬೈಕ್ ಸವಾರ ಸಿಲುಕಿಕೊಂಡಿದ್ದಾರೆ. ಇದನ್ನು ನೋಡಿ ಸ್ಥಳದಲ್ಲಿದ್ದವರು ಗಾಬರಿಯಿಂದ ಓಡಿಬಂದಿದ್ದು, ಬೈಕ್ ಸವಾರನನ್ನು ಕ್ಯಾಂಟರ್ ಅಡಿಯಿಂದ ರಕ್ಷಿಸಿದ್ದಾರೆ.

MDK ACCIDENT 5

ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಗಿದ್ದು, ಮಂಗಳೂರು ಅಸ್ಪತ್ರೆಗೆ ರಾವಾನೆ ಮಾಡಲಾಗಿದೆ. ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/0bpHLmzFw38

MDK ACCIDENT 3

Share This Article
Leave a Comment

Leave a Reply

Your email address will not be published. Required fields are marked *