ದಾವಣಗೆರೆ: ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡಲು ಹೋಗಿ ಎದುರಿಗೆ ಬಂದ ಟಾಟಾ ಏಸ್‍ಗೆ ಡಿಕ್ಕಿ (Accident) ಹೊಡೆದು ಸಾವಿಗೀಡಾದ ಘಟನೆ ದಾವಣಗೆರೆಯ (Davanagere) ಡಿಸಿ ಆಫೀಸ್ ಸರ್ಕಲ್‍ನಲ್ಲಿ ನಡೆದಿದೆ.
ಸಾವಿಗೀಡಾದ ಯುವಕನನ್ನು ಮೈಕಲ್ ಕುಮಾರ್ (24) ಎಂದು ಗುರುತಿಸಲಾಗಿದೆ. ಸಿಗ್ನಲ್ ಬಿಟ್ಟ ಬಳಿಕ ಡಿಸಿ ಕಚೇರಿ ಕಡೆಯಿಂದ ಟಾಟಾ ಏಸ್ ವಾಹನ ಹೊರಟಿದೆ. ಈ ವೇಳೆ ರೆಡ್ ಸಿಗ್ನಲ್ ಇದ್ದರೂ ಬೈಕ್ ಸವಾರ ಅಜಾಗರೂಕತೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಬೈಕ್ ಟಾಟಾ ಏಸ್‍ನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ. ಇದನ್ನೂ ಓದಿ: ಚೀತಾಗಳಿಗೆ ಕುಡಿಯಲು ನೀರು ಕೊಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಕೆಲಸದಿಂದ ವಜಾ!
ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಾಸ್ಟೆಲ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ