ತನ್ನದಲ್ಲದ ತಪ್ಪಿಗೆ ಬೈಕ್ ಸವಾರ ಬಲಿ

Public TV
0 Min Read
ygr bike death collage

ಯಾದಗಿರಿ: ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಆಯಾತಪ್ಪಿ ಬಿದ್ದು ತನ್ನದಲ್ಲದ ತಪ್ಪಿಗೆ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಕುರಕುಂದ ಗ್ರಾಮದ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಮೃತ ಬೈಕ್ ಸವಾರ ವಡಗೇರ ತಾಲೂಕಿನ ತಡಿಬಿಡಿ ಗ್ರಾಮದ ನಿವಾಸಿ ಮಾರಪ್ಪ (43) ಎಂದು ಗುರುತಿಸಲಾಗಿದೆ.

ಕುರಕುಂದ ಗ್ರಾಮದ ರಸ್ತೆ ಮಧ್ಯೆ ನೀರಿನ ಪೈಪ್ ಅಳವಡಿಸಲು ಗ್ರಾಮ ಪಂಚಾಯ್ತಿಯಿಂದ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಸೂಚನ ಫಲಕ ಹಾಕದೆ ಇರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *