ಹೆಲ್ಮೆಟ್ ಹಾಕದಕ್ಕೆ ಫೈನ್- ಖಾಕಿ ಮುಂದೆ ಬೈಕ್ ಸವಾರನ ಹುಚ್ಚಾಟ

Public TV
1 Min Read
ckb bike

ಚಿಕ್ಕಬಳ್ಳಾಪುರ: ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕಿದ್ದಕ್ಕೆ ಪೊಲೀಸರ ಜೊತೆಗೆ ಬೈಕ್ ಸವಾರನೊಬ್ಬ ಗಲಾಟೆಗಿಳಿದು ಹುಚ್ಚಾಟ ಪ್ರದರ್ಶಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

10 ದಿನಗಳ ಹಿಂದೆ ನಗರ ಹೊರವಲಯದ ಹಾರೋಬಂಡೆ ಬಳಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ ಬೈಕ್‍ನಲ್ಲಿ ಬರುತ್ತಿದ್ದ ಸವಾರನೊಬ್ಬನನ್ನು ಪೊಲೀಸರು ಹಾರೋಬಂಡೆ ಬಳಿ ತಡೆದಿದ್ದರು. ಬಳಿಕ ನಿಯಮ ಉಲಂಘಿಸಿದಕ್ಕೆ ದಂಡ ಕಟ್ಟುವಂತೆ ಆತನಿಗೆ ಪೊಲೀಸರು ಹೇಳಿದ್ದಾರೆ. ದಂಡ ಯಾಕೆ ಕಟ್ಟಬೇಕು ಅಂತ ಪೊಲೀಸರ ಜೊತೆಯೇ ಸವಾರ ಉದ್ಧಟತನ ಮೆರೆದಿದ್ದಾನೆ.

ckb bike 1

ಅಷ್ಟೆ ಅಲ್ಲದೆ ಪೊಲೀಸ್ ಜೀಪ್ ಮೇಲೆ ಕಲ್ಲು ಎತ್ತಿ ಹಾಕಲು ಯತ್ನಿಸಿದ್ದು, ಈ ದೃಶ್ಯವನ್ನು ಸ್ಥಳದಲ್ಲಿದ್ದ ಪೊಲೀಸರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಪೊಲೀಸರ ಜೊತೆಯೇ ಗಲಾಟೆಗಳಿದಿದ್ದ ಬೈಕ್ ಸವಾರ ಹುಚ್ಚಾಟ ಪ್ರದರ್ಶಿಸಿದಾಗ ಆತನನ್ನು ಪೊಲೀಸರು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು. ಆದ್ರೆ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಸವಾರ ಪರಾರಿಯಾಗಿದ್ದಾನೆ. ಅಲ್ಲದೆ ಕಳೆದ 10 ದಿನಗಳಿಂದ ಬೈಕ್ ವಾಪಾಸ್ ಪಡೆದುಕೊಳ್ಳಲು ಕೂಡ ಆತ ಬರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದಷ್ಟೇ ಅಲ್ಲದೇ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

https://www.youtube.com/watch?v=xDDdgkg5j_o

Share This Article
Leave a Comment

Leave a Reply

Your email address will not be published. Required fields are marked *