ಬೆಂಗಳೂರು: ಒನ್ ವೇ ನಲ್ಲಿ (One Way) ಬಂದು ಕಾರು ಚಾಲಕನ ಜೊತೆ ಕಿರಿಕ್ ಮಾಡಿದ್ದಕ್ಕೆ ಬೈಕ್ ಸವಾರನಿಗೆ ಭಾರತೀಯ ವಾಯು ಸೇನೆಯ ಯೋಧ( Soldier) ಏಟು ನೀಡಿದ ಘಟನೆ ಎರಡು ಮೂರು ದಿನಗಳ ಹಿಂದೆ ನಗರದ ಈಜೀಪುರ ಸಿಗ್ನಲ್ ಬಳಿ ನಡೆದಿದೆ.
ಒನ್‌ವೇ ನಲ್ಲಿ ಬಂದ ಬೈಕ್ ಸವಾರ ನೇರವಾಗಿ ಕಾರಿಗೆ ಅಡ್ಡ ಬಂದು ಗಾಡಿ ನಿಲ್ಲಿಸಿ ಕಾರನ್ನು ಸೈಡ್‌ಗೆ ಹೋಗುವಂತೆ ಸೂಚನೆ ನೀಡಿದ್ದಾನೆ. ಕಾರು ಚಾಲಕ ಪಕ್ಕಕ್ಕೆ ಹೋಗದೇ ಅಲ್ಲಿಯೇ ನಿಂತುಕೊಳ್ಳುತ್ತಾನೆ. ಈ ವೇಳೆ ಎದುರು ರಸ್ತೆಯಿಂದ ಏರ್ ಫೋರ್ಸ್ ಟ್ರಕ್ ಬಂದಿದ್ದು, ವಾಹನ ಇಳಿದು ಬಂದ ಭಾರತೀಯ ವಾಯುಸೇನೆಯ ಯೋಧ, ಬೈಕ್ ಸವಾರನಿಗೆ ನೀವು ಬಂದಿದ್ದು, ತಪ್ಪು. ಹಿಂದಕ್ಕೆ ಹೋಗಿ ಎಂದು ಬುದ್ಧಿ ಹೇಳಿದ್ದಾರೆ. ಬೈಕ್ ಸವಾರ ಅವರ ಮಾತನ್ನು ಲೆಕ್ಕಿಸದೇ ಯೋzಧನ ಎದುರು ಮಾತನಾಡಿದ್ದಾನೆ. ಈ ವೇಳೆ ಕೋಪಗೊಂಡ ಯೋಧ ಆತನ ತಲೆಗೆ ಏಟು ಕೊಟ್ಟಿದ್ದಾರೆ. ಇದನ್ನೂ ಓದಿ: ರಾಣಿಝರಿ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್ – ಸರ್ಕಾರದ ಹಣ ಪ್ರಿಯತಮೆ ಖಾತೆಗೆ
ಘಟನೆಯನ್ನ ನೋಡಿದ ಮಹಿಳಾ ಪೊಲೀಸ್ ಪೇದೆ, ಸ್ಥಳಕ್ಕೆ ಬಂದು ಬೈಕ್ ಸವಾರನನ್ನ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್